crime

ಆಸ್ತಿ ಲಪಟಾಯಿಸಲು ಪತ್ನಿಯನ್ನೇ ಹತ್ಯೆ ಮಾಡಿದ ಮಂಡ್ಯದ ಪ್ರೋಪೆಸರ್ ಬಂಧನ

  • ಮಂಡ್ಯದಲ್ಲಿ ಹೆಂಡತಿ ಮಲಗಿದ್ದ ವೇಳೆ ಮುಖಕ್ಕೆ ದಿಂಬು ಇಟ್ಟು ಕೊಂದ ಗಂಡ
  • ತಂದೆ, ತಾಯಿ ಹಾಗೂ ತಂಗಿ ಸಾವಿನ ಬಳಿಕ ಶೃತಿ ಹೆಸರಿಗೆ ಆಸ್ತಿ ಲಪಟಾಯಿಸುವ ಸಂಚು
  • ಮೈಸೂರಿನಲ್ಲಿ ಕಮರ್ಷಿಯಲ್ ಬಿಲ್ಡಿಂಗ್ಸ್, ಮನೆ, ಸೈಟ್‌ಗಳು ಹೆಂಡತಿ ಶೃತಿ ಹೆಸರಲ್ಲಿತ್ತು

ಮಂಡ್ಯ : ಮಂಡ್ಯದ ವಿ.ವಿ ನಗರ ಬಡಾವಣೆಯಲ್ಲಿ ಗೃಹಿಣಿ ಎಸ್‌. ಶೃತಿಯ ಆಸ್ತಿ ಆಸೆಗೆ ಗಂಡನಿಂದಲೇ ಹೆಂಡತಿಯ ಹತ್ಯೆ ಮಾಡಿರುವ ಸತ್ಯ ಬಯಲಾಗಿದೆ.

ಹಣದ ದಾಹಕ್ಕೆ ಪತ್ನಿಯನ್ನೇ ಕೊಂದು ಸಹಜ ಸಾವೆಂದು ನಾಟಕವಾಡಿದ ಪ್ರೊಫೆಸರ್ ಗಂಡನನ್ನು ಮಂಡ್ಯದ ಪಶ್ಚಿಮ ಪೋಲೀಸರು ಬಂಧಿಸಿದ್ದಾರೆ.

ವಿ.ವಿ ನಗರ ಬಡಾವಣೆಯ ಎಸ್.ಶೃತಿ (32) ಕೊಲೆಯಾದ ಗೃಹಿಣಿ. ಟಿ.ಎನ್.ಸೋಮಶೇಖರ್(41) ಎಂಬಾತನೇ ಹೆಂಡತಿ ಮಲಗಿದ್ದ ವೇಳೆ ಮುಖಕ್ಕೆ ದಿಂಬು, ಬೆಡ್ ಶೀಟ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಆ ನಂತರ ಸಹಜ ಸಾವೆಂದು ಬಿಂಬಿಸಿದ್ದ ನಾಟಕವಾಡಿರುವುದು ಬಯಲಾಗಿದೆ.

ತಂದೆ, ತಾಯಿ ಹಾಗೂ ತಂಗಿ ಸಾವಿನ ಬಳಿಕ ಶೃತಿ ಹೆಸರಿಗೆ ಕೋಟ್ಯಾಂತರ ರೂಪಾಯಿ ಆಸ್ತಿ ಬಂದಿದೆ. ಕೆಲ ವರ್ಷಗಳ ಹಿಂದೆ ಮೃತ ಶೃತಿ ತಂದೆ, ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

2018ರಲ್ಲಿ ಶೃತಿ ತಂಗಿ ಸುಶ್ಮಿತ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಮೂವರ ಸಾವಿನ ಬಳಿಕ ಶೃತಿ ಹೆಸರಿಗೆ 10 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಬಂದಿದೆ. ಮೈಸೂರಿನ ಪ್ರಮುಖ ನಗರಗಳಲ್ಲಿದ್ದ ಕಮರ್ಷಿಯಲ್ ಬಿಲ್ಡಿಂಗ್ಸ್, ಮನೆ ಹಾಗೂ ಸೈಟ್‌ಗಳು ಈಕೆಯ ಹೆಸರಿಗೆ ಸೇರಿದೆ.

ಇತ್ತೀಚೆಗೆ ಕೋಟ್ಯಾಂತರ ರೂಪಾಯಿ ಆಸ್ತಿ ಮಾರಲು ಶೃತಿಗೆ ಪತಿ ಸೋಮಶೇಖರ್ ಒತ್ತಾಯಿಸುತ್ತಿದ್ದ.

ಮೈಸೂರಿನ ಆಸ್ತಿ ಮಾರಾಟ ಮಾಡಿ ಬೇರೆಡೆ ಆಸ್ತಿ ಖರೀದಿಗೆ ಪ್ಲಾನ್‌ ಮಾಡಿದ್ದ. ಆದರೆ ಶೃತಿ ಆಸ್ತಿ ಮಾರಾಟಕ್ಕೆ ನಿರಾಕರಿಸಿದ್ದರು. ಇದೇ ವಿಚಾರಕ್ಕೆ ಹಲವು ಬಾರಿ ಗಂಡ, ಹೆಂಡತಿ ಮಧ್ಯೆ ಜಗಳ ನಡೆದಿದೆ.

ಕಳೆದ ಶನಿವಾರ ಶೃತಿ ಮನೆಯಲ್ಲಿ ಮಲಗಿದ್ದ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಆದರೆ ಪಲ್ಸ್ ರೇಟ್ ಕಮ್ಮಿಯಾಗಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾಳೆಂದು ನಾಟಕವಾಡಿದ್ದಾನೆ.

ನಂತರ ಮೃತ ಶೃತಿ ಚಿಕ್ಕಪ್ಪನಿಗೆ ಕರೆ ಮಾಡಿ ಸಹಜ ಸಾವೆಂದು ಸೋಮಶೇಖರ್ ತಿಳಿಸಿದ್ದಾನೆ. ಅನುಮಾನಗೊಂಡ ಶೃತಿ ಚಿಕ್ಕಪ್ಪ ಕುಮಾರಸ್ವಾಮಿ ಅನುಮಾನಾಸ್ಪದ ಸಾವೆಂದು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ತನಿಖೆ ಆರಂಭಿಸಿದ್ದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಸಾಯಿಸಿರುವ ಸತ್ಯ ಗೊತ್ತಾಗಿದೆ.

ಶೃತಿ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದ ಮೇಲೆ ಪತಿ ಸೋಮಶೇಖರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.ಕರುನಾಡ ಜಿಲ್ಲೆಗಳ ಕಿರು ಪರಿಚಯ – 16- ಶಿವಮೊಗ್ಗ

ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಸೋಮಶೇಖರ್‌ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿ ಪತಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Team Newsnap
Leave a Comment

Recent Posts

ಎಸ್ ಎಸ್ ಎಲ್ ಸಿ ಕಡಮೆ ಅಂಕ : ಮದ್ದೂರಿನಲ್ಲಿ ಇಬ್ಬರ ವಿದ್ಯಾರ್ಥಿ ಗಳು ಆತ್ಮಹತ್ಯೆ

ಮದ್ದೂರು : ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದ ವಿ ಇಬ್ಬರ… Read More

May 9, 2024

ಸೋಮವಾರದ ತನಕವೂ ರೇವಣ್ಣ ಜೈಲು ಹಕ್ಕಿ

ಬೆಂಗಳೂರು : ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ನಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಸೋಮವಾರದವರೆಗೆ… Read More

May 9, 2024

SSLC ಫಲಿತಾಂಶ : ಬಾಲಕಿಯರೇ ಮೇಲುಗೈ ಉಡುಪಿ ಪ್ರಥಮ- ಯಾದಗಿರಿ ಕೊನೆ

ಎಸ್ಎಸ್ಎಲ್ ಸಿ 2024ರ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಉಡುಪಿಗೆ ಪ್ರಥಮ ಸ್ಥಾನ ಲಭ್ಯವಾಗಿದೆ.8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ… Read More

May 9, 2024

ರೇವಣ್ಣ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ : 4567 ಖೈದಿ ಸಂಖ್ಯೆ ನೀಡಿಕೆ

ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಹೆಚ್.… Read More

May 8, 2024

SSLC ಫಲಿತಾಂಶ ಪರಿಶೀಲಿಸಲು ಸುಲಭ ಹಂತಗಳು : ವಿವರ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ಈಜು ಕಲಿಯಲು ಹೋದ 10 ವರ್ಷದ ಬಾಲಕ ನೀರುಪಾಲು

ರಾಯಚೂರು: ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ನಡೆದಿದೆ. ವಿನಾಯಕ (10) ಜೇಗರ್‌ಕಲ್ ಮಲ್ಲಾಪೂರು… Read More

May 8, 2024