ಕರುನಾಡ ಜಿಲ್ಲೆಗಳ ಕಿರು ಪರಿಚಯ – 16- ಶಿವಮೊಗ್ಗ

Team Newsnap
1 Min Read

ಕಲಾವತಿ ಪ್ರಕಾಶ್
ಬೆಂಗಳೂರು

ಶಿವ-ಮುಖ ಎಂಬ ಪದಪುಂಜದಿಂದಲೆ ಆಯ್ತು
ಸಿಹಿ-ಮೊಗೆ ಎಂಬುದು ಶಿವಮೊಗ್ಗ ಎಂದಾಯ್ತು
ತೀರ್ಥಹಳ್ಳಿ ಭದ್ರಾವತಿ ಶಿವಮೊಗ್ಗ ಶಿಕಾರಿಪುರ
ತಾಲ್ಲೂಕುಗಳಿವು ೮ ಸಾಗರ ಸೊರಬ ಹೊಸನಗರ

ಮೌರ್ಯ ಶಾತವಾಹನ ಕದಂಬ ಬಾದಾಮಿಚಾಲುಕ್ಯರು
ರಾಷ್ಟ್ರಕೂಟರು ಗಂಗ ಹೊಯ್ಸಳರು ಹೈದರಲಿಯರು
ವಿಜಯನಗರದ ಅರಸರು ಕೆಳದಿ ನಾಯಕರಾಳಿದರು
ಶಿವಮೊಗ್ಗವಾಳಿದ ಹೆಮ್ಮೆಯ ರಾಜಮನೆತನದರಸರು

ಕಾಳಿ ಗಂಗಾವತಿ ಶರಾವತಿ ತದಡಿ ಈ ಜಿಲ್ಲೆಯಲಿ
ಹುಟ್ಟುವ ಹಾಗೂ ತುಂಗಾ ಭದ್ರಾ ನದಿ ಹರಿವವಿಲ್ಲಿ ಶರಾವತಿ ಜಲಪಾತ ಕುಂಚಿಕಲ್ ಜಲಪಾತಗಳಿಲ್ಲಿ
ಅಚ್ಚಕನ್ಯೆ ಅಬ್ಬೆ ಗಳಲ್ಲದೆ ಹಿಡ್ಲಮನೆ ಜಲಪಾತವೂ ಇಲ್ಲಿ

ಅಡಿಕೆ ಭತ್ತ ಕಾಳು ಮೆಣಸು ಏಲಕ್ಕಿ ಬೆಳೆಗಲ್ಲದೆ
ದಾಲ್ಚಿನ್ನಿ ಜಾಯಿಕಾಯಿ ಬಾಳೆ ಮಾವು ಬೆಳೆವರಲ್ಲದೆ
ಗೋಡಂಬಿ ಎಣ್ಣೆ ಕಾಳು ಜೋಳಗಳು ಬೆಳೆವುದಿದೆ
ಅಕ್ಕಿಯ ಕಣಜವೆಂಬ ಹೆಸರೂ ಈ ಜಿಲ್ಲೆಗೆ ಬಂದಿದೆ

ಯಕ್ಷಗಾನ ಡೊಳ್ಳು ಕುಣಿತ ಜಾನಪದ ಶೈಲಿಗಳಿವೆ
ಗಂಧದ ಕಟ್ಟಿಗೆಯ ಕೆತ್ತನೆಯ ಕುಶಲ ಕರ್ಮಿಗಳು
ಗುಡಿಗಾರ ಹೊಯ್ಸಳ ಶೈಲಿಯ ಶಿಲ್ಪ ಕಲೆ ಶಿಲ್ಪಿಗಳು
ವೇಣುಗೋಪಾಲ ಶಿಲ್ಪಕೆ ರಾಷ್ಟ್ರಪ್ರಸಸ್ತಿ ಪಡೆದವರು

ರಾಷ್ಟ್ರ ಕವಿ ಕುವೆಂಪುರವರು ಹುಟ್ಟಿದ ಜಿಲ್ಲೆಯಿದು
ಜಿ ಎಸ್ ಶಿವರುದ್ರಪ್ಪ ಯು ಆರ್ ಅನಂತ ಮೂರ್ತಿ
ಎಮ ಕೆ ಇಂದಿರಾ ಪೂರ್ಣಚಂದ್ರ ತೇಜಸ್ವಿ ಸಾಹಿತಿಗಳು
ಕೆ ವಿ ಸುಬ್ಬಣ್ಣ ಪಿ ಲಂಕೇಶ್ ಜನಿಸಿದ ಜಿಲ್ಲೆ ಇದು

ಸುಂದವಾದ ಸಹ್ಯಾದ್ರಿ ಬೆಟ್ಟಗಳ ಸಾಲುಗಳಲಿ
ಎತ್ತರದ ಕೊಡಚಾದ್ರಿ ಕುಂದಾದ್ರಿ ಆಗುಂಬೆ ಬೆಟ್ಟವಿಲ್ಲಿ
ಸೂರ್ಯೊದಯ ಸೂರ್ಯಾಸ್ತದಂದದ ನೋಟವಿಲ್ಲಿ
ಆಗುಂಬೆ ದಕ್ಷಿಣದ ಚಿರಾಪುಂಜಿ ಎಂಬ ಪ್ರಸಿದ್ಧಿಯಲ್ಲಿ

ಸಾಗರದ ಸುಪ್ರಸಿದ್ಧ ಶರಾವತಿ ವನ್ಯಧಾಮವಲ್ಲದೆ
ಭದ್ರಾ ವನ್ಯ ಜೀವಿ ಅಭಯಾರಣ್ಯವೂ ಇಲ್ಲಿದೆ
ಗುಡವಿ ಮತ್ತು ಮಂಡಗದ್ದೆ ಪಕ್ಷಿಧಾಮಗಳು ಇಲ್ಲಿವೆ
ಈ ಎಲ್ಲ ಪ್ರೇಕ್ಷಣೀಯ ಸ್ಥಳಗಳು ಇದೇ ಜಿಲ್ಲೆಯಲ್ಲಿವೆ

ಕೇದಾರೇಶ್ವರ ತ್ರಿಪುರಾಂತೇಶ್ವರ ಪ್ರಭುದೇವರ ಗುಡಿ
ಹೊಂಬುಚಾ ಜೈನರ ಪ್ರಸಿದ್ಧ ಯಾತ್ರಾ ಸ್ಥಳ ನೋಡಿ
ಇಕ್ಕೇರಿಯ ಅಮೋಘೇಶ್ವರ ದೇವಾಲಯವಿರುವುದು ಅಕ್ಕಮಹಾದೇವಿಯ ಜನ್ಮ ಸ್ಥಳವಿದು ಉಡುತಡಿ

Share This Article
Leave a comment