ಎರಡು ದಿನ ಸಂಪೂರ್ಣ ಲಾಕ್ ಡೌನ್ ಆದ ಬಳಿಕ ಅಗತ್ಯ ವಸ್ತುಗಳ ಖರೀದಿಗೆ ಗುರುವಾರ ಬೆಳಿಗ್ಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಅಗತ್ಯವಸ್ತು ಖರೀದಿಗೆ ಮಂಡ್ಯ ಜನ ಮುಗಿಬಿದ್ದರು
ಮಂಡ್ಯದ APMC ಮಾರುಕಟ್ಟೆಯಲ್ಲಿ ಜನಜಂಗುಳಿ:
ತರಕಾರಿ, ಹಣ್ಣು ಖರೀದಿ ವೇಳೆ ಕೊವಿಡ್ ನಿಯಮ ಮರೆತ ಜನರು. ಸಾಮಾಜಿಕ ಅಂತರ ಕಾಪಾಡದೆ ಗುಂಪು ಗುಂಪಾಗಿ ಖರೀದಿ ಮಾಡಿದ ದೃಷ್ಯ ಮಂಡ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾಣಬಹುದಿತ್ತು.
ಜನರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ :
ಮಾರುಕಟ್ಟೆ ಮುಂಭಾಗ ಲಾಠಿ ಹಿಡಿದು ಜನರನ್ನು ನಿಯಂತ್ರಿಸಲು ಪೊಲೀಸರು ಮುಂದಾಗಿದ್ದರು. ಮಾರ್ಕೆಟ್ ಮುಂಭಾಗ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಈ ವಾರ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿರುವ ಜಿಲ್ಲಾಡಳಿತ ಇಂದು ಅಗತ್ಯ ವಸ್ತುಗಳ ಖರೀದಿ ಅವಕಾಶ. ಮತ್ತೆ ಶುಕ್ರವಾರ, ಶನಿವಾರ ಸಂಪೂರ್ಣ ಲಾಕ್.
ತರಕಾರಿ, ದಿನಸಿ ಖರೀದಿ ವೇಳೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವ ಜನರು.
ಮದ್ಯ ಖರೀದಿಯಲ್ಲಿ ಮುಗಿ ಬಿದ್ದ ಜನ :
ಮಂಡ್ಯದಲ್ಲಿ ಎರಡು ದಿನಗಳ ಬ್ರೇಕ್ ನಂತರ ಮದ್ಯ ( ಎಣ್ಣೆ) ಖರೀದಿಗೆ ಮುಗಿ ಬಿದ್ದ ಜನರು.
ಮಂಡ್ಯದ ಬಹುತೇಕ ಮದ್ಯದಂಗಡಿಗಳು ಫುಲ್ ರಷ್, ಬೆಳಿಗ್ಗೆ ಖರೀದಿಗೆ ಮುಗಿಬಿದ್ದ ಜನ.
ಇಂದು ಬೆಳಗೆ 6 ರಿಂದ10 ವರೆಗೆ ಮಾತ್ರ ಎಣ್ಣೆ ಖರೀದಿಗೆ ಅವಕಾಶ. ನಿನ್ನೆ ಮತ್ತು ಮೊನ್ನೆ ಎರಡು ದಿನ ಎಣ್ಣೆ ಮಾರಾಟಕ್ಕೂ ನಿಷೇಧವಿದಿಸಿದ್ದ ಜಿಲ್ಲಾಡಳಿತ.
ನಾಳೆ ಮತ್ತು ನಾಳಿದ್ದು ಸಹ ಎಣ್ಣೆ ಮಾರಾಟಕ್ಕೆ ಬ್ರೇಕ್. ಹೀಗಾಗಿ ಇಂದೇ ಖರೀದಿಯ ಭರಾಟೆಯಲ್ಲಿ ಮದ್ಯ ಪ್ರಿಯರು.
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ