ಮಂಡ್ಯ: ದಿನಸಿ, ಮದ್ಯ ಖರೀದಿಗೆ ನೂಕುನುಗ್ಗಲು – ಜನರ ನಿಯಂತ್ರಣವೇ ಹರಸಾಹಸ

Team Newsnap
1 Min Read

ಎರಡು ದಿನ ಸಂಪೂರ್ಣ ಲಾಕ್ ಡೌನ್ ಆದ ಬಳಿಕ ಅಗತ್ಯ ವಸ್ತುಗಳ ಖರೀದಿಗೆ ಗುರುವಾರ ಬೆಳಿಗ್ಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಅಗತ್ಯವಸ್ತು ಖರೀದಿಗೆ ಮಂಡ್ಯ ಜನ ಮುಗಿಬಿದ್ದರು‌

ಮಂಡ್ಯದ APMC ಮಾರುಕಟ್ಟೆಯಲ್ಲಿ ಜನಜಂಗುಳಿ:

ತರಕಾರಿ, ಹಣ್ಣು ಖರೀದಿ ವೇಳೆ ಕೊವಿಡ್ ನಿಯಮ ಮರೆತ ಜನರು. ಸಾಮಾಜಿಕ ಅಂತರ ಕಾಪಾಡದೆ ಗುಂಪು ಗುಂಪಾಗಿ ಖರೀದಿ ಮಾಡಿದ ದೃಷ್ಯ ಮಂಡ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾಣಬಹುದಿತ್ತು.‌

ಜನರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ :

ಮಾರುಕಟ್ಟೆ ಮುಂಭಾಗ ಲಾಠಿ ಹಿಡಿದು ಜನರನ್ನು ನಿಯಂತ್ರಿಸಲು ಪೊಲೀಸರು ಮುಂದಾಗಿದ್ದರು. ಮಾರ್ಕೆಟ್ ಮುಂಭಾಗ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

ಈ ವಾರ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿರುವ ಜಿಲ್ಲಾಡಳಿತ ಇಂದು ಅಗತ್ಯ ವಸ್ತುಗಳ ಖರೀದಿ ಅವಕಾಶ. ಮತ್ತೆ ಶುಕ್ರವಾರ, ಶನಿವಾರ ಸಂಪೂರ್ಣ ಲಾಕ್.
ತರಕಾರಿ, ದಿನಸಿ ಖರೀದಿ ವೇಳೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವ ಜನರು.

c6040022 feed 4a85 bab3 9cd5cf035389 edited

ಮದ್ಯ ಖರೀದಿಯಲ್ಲಿ ಮುಗಿ ಬಿದ್ದ ಜನ :

ಮಂಡ್ಯದಲ್ಲಿ ಎರಡು ದಿನಗಳ ಬ್ರೇಕ್ ನಂತರ ಮದ್ಯ ( ಎಣ್ಣೆ) ಖರೀದಿಗೆ ಮುಗಿ ಬಿದ್ದ ಜನರು.

ಮಂಡ್ಯದ ಬಹುತೇಕ ಮದ್ಯದಂಗಡಿಗಳು ಫುಲ್ ರಷ್, ಬೆಳಿಗ್ಗೆ ಖರೀದಿಗೆ ಮುಗಿಬಿದ್ದ ಜನ.

ಇಂದು ಬೆಳಗೆ 6 ರಿಂದ10 ವರೆಗೆ ಮಾತ್ರ ಎಣ್ಣೆ ಖರೀದಿಗೆ ಅವಕಾಶ. ನಿನ್ನೆ ಮತ್ತು ಮೊನ್ನೆ ಎರಡು ದಿನ ‌ಎಣ್ಣೆ ಮಾರಾಟಕ್ಕೂ ನಿಷೇಧವಿದಿಸಿದ್ದ ಜಿಲ್ಲಾಡಳಿತ.

ನಾಳೆ ಮತ್ತು ನಾಳಿದ್ದು ಸಹ ಎಣ್ಣೆ ಮಾರಾಟಕ್ಕೆ ಬ್ರೇಕ್. ಹೀಗಾಗಿ ಇಂದೇ ಖರೀದಿಯ ಭರಾಟೆಯಲ್ಲಿ ಮದ್ಯ ಪ್ರಿಯರು.


Share This Article
Leave a comment