ಮಂಡ್ಯ ನಗರಸಭೆ : ಜೆಡಿಎಸ್ ನ ಮಂಜು, ಫಾತಿಮಾ ಅಧ್ಯಕ್ಷ- ಉಪಾಧ್ಯಕ್ಷ ರಾಗಿ ಅವಿರೋಧ ಆಯ್ಕೆ

Team Newsnap
1 Min Read

ಕುತೂಹಲ ಮೂಡಿಸಿದ್ದ ಮಂಡ್ಯ ನಗರ ಸಭೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್.ಎಸ್.ಮಂಜು, ಉಪಾಧ್ಯಕ್ಷರಾಗಿ ಇಶ್ರತ್ ಫಾತಿಮಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ 20ನೇ ವಾರ್ಡಿನ ಹೊಸಳ್ಳಿ ಎಚ್‍.ಎಸ್. ಮಂಜು ಕಾಂಗ್ರೆಸ್ ಪಕ್ಷದಿಂದ 10ನೇ ವಾರ್ಡ್ ನ ಶಿವಪ್ರಕಾಶ್ ಅವರು ನಾಮಪತ್ರ ಸಲ್ಲಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ 13ನೇ ವಾರ್ಡ್ ಇಶ್ರತ್ ಫಾತಿಮಾ ಹಾಗೂ ಕಾಂಗ್ರೆಸ್ ಪಕ್ಷದಿಂದ 5ನೇ ವಾರ್ಡಿನ ನಯೀಮ್ ಅವರು ನಾಮಪತ್ರ ಸಲ್ಲಿಸಿದ್ದರು.

ನಗರಸಭೆಯಲ್ಲಿ ಒಟ್ಟು ಸದಸ್ಯರ ಬಲಾಬಲ 35 ಸದಸ್ಯರಿದೆ. ಇದರಲ್ಲಿ ಜೆಡಿಎಸ್ 18, ಕಾಂಗ್ರೆಸ್ 10, ಬಿಜೆಪಿ 2, ಪಕ್ಷೇತರರು 5 ಮಂದಿ ಇದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿತ್ತು.
ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಶಿವಪ್ರಕಾಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಯೀಮ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದ ಕಾರಣ ಅಧ್ಯಕ್ಷರಾಗಿ ಹೆಚ್. ಎಸ್. ಮಂಜು ಹಾಗೂ ಉಪಾಧ್ಯಕ್ಷರಾಗಿ ಇಶ್ರತ್ ಫಾತಿಮಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಧಿಕಾರಿ ಆದ ನೇಹಾ ಜೈನ್ ಪ್ರಕಟಿಸಿದರು.
ಶಾಸಕ ಎಂ. ಶ್ರೀನಿವಾಸ್ , ಆಯುಕ್ತ ಲೋಕೇಶ್ ಉಪಸ್ಥಿತರಿದ್ದರು

Share This Article
Leave a comment