ಮಂಡ್ಯ ಲೋಕಸಭೆ ಕ್ಷೇತ್ರ ರಣಕಣ

Team Newsnap
2 Min Read

ಸಿಆರ್ ಎಸ್ ನೆಂಟನೇ ‘ಕೈ ಬಂಟ’

  • ಕಾಂಗ್ರೆಸ್ ಅಳೆದು ತೂಗಿ ನಾಗಮಂಗಲ ಉದ್ಯಮಿಯನ್ನು ಕಣಕ್ಕೆ ಇಳಿಸಲು ತೆರೆಮರೆ ತಯಾರಿ
  • ಸುಮಲತಾ , ರಮ್ಯಾಗೆ ಇಲ್ಲ ಕೈ ಟಿಕೆಟ್ ?
  • ಹಣ ಇದ್ದರೆ ಸಾಕು, ಹೊಸ ಮುಖಕ್ಕೂ ಮಂಡ್ಯದ ಮತದಾರ ಮಣೆ ಹಾಕುವ. ಎಂಬ ಉಡಾಫೆ ತಂತ್ರ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆಯ ಘೋಷಣೆಯ ಮೊದಲೇ ರಣರಂಗದ ವಾತಾವರಣ ಸೃಷ್ಠಿಯಾಗಿದೆ.

ಈ ಬಾರಿ ಕಾಂಗ್ರೆಸ್ ಪಕ್ಷವು ಸಿನಿಮಾ ನಟರಿಗೆ ಅವಕಾಶ ನೀಡದೆ ಹೊಸ ಮುಖವನ್ನು ಕಣಕ್ಕಿಳಿಸಿ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ.

ಜೆಡಿಎಸ್ – ಬಿಜೆಪಿ ಮೈತ್ರಿಕೂಟ ಮಾತ್ರ ಇನ್ನೂ ನಿಗೂಢ ನಡೆ ಸೂಚಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯ ನೇರ ಫೈಟ್ ಮಾತ್ರ ಸ್ಷಷ್ಟವಾಗಿದೆ.

ಸಮರ್ಥ ಅಭ್ಯರ್ಥಿಯ ಹುಡುಕಾಟ ನಡೆಸಿದ ಕಾಂಗ್ರೆಸ್ ನಾಗಮಂಗಲ ಮೂಲದ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಚುನಾವಣಾ ಅಖಾಡಕ್ಕೆ ಇಳಿಸಲು ತಯಾರಿ ನಡೆದಿದೆಸಚಿವ ಎನ್.ಚೆಲುವರಾಯಸ್ವಾಮಿ ಸಂಬಂಧಿ, ಉದ್ಯಮಿ ಸ್ಟಾರ್ ಚಂದ್ರು ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿಸಿದ್ದಾರೆ . ಕೆಪಿಸಿಸಿ ಕೂಡ ಇವರ ಹೆಸರನ್ನು ಹೈಕಮಾಂಡ್ ಗೆ ಶಿಫಾರಸು ಮಾಡಿದೆ, ವರಿಷ್ಠರ ಸಮ್ಮತಿ ದೊರೆತರೆ ಇವರೆ ಅಭ್ಯರ್ಥಿ ಎಂದು ಸಚಿವರ ಆಪ್ತರ ಅಂಬೋಣ

ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಮತ್ತೊಂದು ಕ್ಷೇತ್ರದಲ್ಲಿ ಪಕ್ಷ ಬೆಂಬಲಿಸಿದ್ದ ಅಭ್ಯರ್ಥಿಗಳು ಈ ಹಿಂದಿನ ಚುನಾವಣೆಯಲ್ಲಿ ಶಾಸಕರಾಗಿ ಚುನಾಯಿತರಾಗಿದ್ದಾರೆ.

ರಾಜ್ಯದಲ್ಲಿ ಯೂ ಕೂಡ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಲೋಕಸಭಾ ಚುನಾವಣೆಯು ಕಾಂಗ್ರೆಸ್ ಗೆ ಕಣ ಪ್ರತಿಷ್ಠಿತವಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಲೋಕಸಭಾ ಚುನಾವಣೆಗೆ ಸಚಿವರನ್ನು ಕಣಕ್ಕಿಳಿಸಲು ಚಿಂತಿಸಿದೆ ಹಾಗಾಗಿ ಸಚಿವ ಚೆಲುವರಾಯಸ್ವಾಮಿ ಅಂತಿಮವಾಗಿ ಕಣಕ್ಕಿಳಿಯಲಿದ್ದಾರೆ ಎಂಬುದು ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವೂ ಆಗಿದೆ.

ಜೆಡಿಎಸ್ – ಬಿಜೆಪಿ ಮೈತ್ರಿಯಿಂದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಗೆ ಕ್ಷೇತ್ರ ಕೈ ತಪ್ಪಲಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ, ಇದಕ್ಕೆ ಪೂರಕವಾಗಿ ಸುಮಲತಾ ಅಂಬರೀಶ್ ಕಾಂಗ್ರೆಸ್ ನಾಯಕರು ನಮ್ಮೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು, ಸುಮಲತಾ ಅಂಬರೀಶ್ ಬಗ್ಗೆ ಪಕ್ಷದ ಸ್ಥಳೀಯ ನಾಯಕರಿಗೆ ಒಲವು ಇಲ್ಲ. , ಈ ಬಾರಿ ಹೈಬ್ರಿಡ್ ಚುನಾವಣೆ ಇಲ್ಲ, ಪಕ್ಕಾ ನಾಟಿ ಎಂದು ಸಚಿವ ಚೆಲುವರಾಯಸ್ವಾಮಿ ಹೇಳುವ ಮೂಲಕ ಕಾಂಗ್ರೆಸ್ ಪಕ್ಷದಿಂದ ಸುಮಲತಾ ಅಂಬರೀಶ್ ಅಭ್ಯರ್ಥಿಯಾಗಲಿದ್ದಾರೆ ಎಂಬುದನ್ನು ತಳ್ಳಿ ಹಾಕಿದ್ದರು. ಹೀಗಾಗಿ ಹೈಕಮಾಂಡ್ ವರಿಷ್ಠರಿಗೆ ತಲುಪಿರುವ ಆಕಾಂಕ್ಷಿತರ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಸ್ಟಾರ್ ಚಂದ್ರು ಒಬ್ಬರ ಹೆಸರನ್ನೇ ಸೂಚಿಸಲಾಗಿದೆ.

ಕಾಂಗ್ರೆಸ್ ಕಾರ್ಯಕರ್ತರಿಗೆ ಪರಿಚಯ ಇಲ್ಲದ, ಕ್ಷೇತ್ರದ ಮತದಾರರು ನೋಡಿರದ ಉದ್ಯಮಿಯನ್ನು ಲೋಕಸಭಾ ಚುನಾವಣಾ ಕಣಕ್ಕೆ ಅಭ್ಯರ್ಥಿಯನ್ನಾಗಿಸುತ್ತಿರುವ ಬಗ್ಗೆ ಪಕ್ಷದ ಜಿಲ್ಲಾ ನಾಯಕರು ವಿಧಾನಪರಿಷತ್ ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ದಿನೇಶ್ ಗೂಳಿಗೌಡರನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದೆವು ಗೆಲ್ಲಲಿಲ್ಲವಾ ಎಂಬ ಸಮರ್ಥನೆಗೆ ಮುಂದಾಗಿದ್ದಾರೆ.ರಾಜ್ಯ ಬಜೆಟ್ ಅಧಿವೇಶನ ಫೆ.12 ರಿಂದ 23 ರವರೆಗೆ 

ಕಾಂಗ್ರೆಸ್ ಹೈಕಮಾಂಡ್ ಸ್ಟಾರ್ ಚಂದ್ರು ಸ್ಪರ್ಧೆ ಗೆ ಹಸಿರು ನಿಶಾನೆ ತೋರಲಿದೆಯಾ ಎಂಬುದನ್ನು ಕಾಯ್ದು ನೋಡಬೇಕು .

Share This Article
Leave a comment