ಮಂಡ್ಯ: ಚಾಮರಾಜನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ KSRTC ಬಸ್ ಮದ್ದೂರಿನ ರುದ್ರಾಕ್ಷಿಪುರದ ಬಳಿ ಚಾಲಕನ ಅಜಾಗರೂಕತೆಯಿಂದಾಗಿ ಅಪಘಾತಕ್ಕೀಡಾಗಿದೆ.
ಇಂದು (ಜ.20) ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಂಭವಿಸಿದ ಈ ಅಪಘಾತದಲ್ಲಿ ಬಸ್ ಪಲ್ಟಿ ಹೊಡೆದು 30 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಚಾಲಕ ಬಸ್ ಚಲಿಸುತ್ತಿದ್ದ ವೇಳೆ ಹಿಂಬದಿ ತಿರುಗಿ ನೋಡಿದ ಸಂದರ್ಭ ಚಕ್ರ ಡಿವೈಡರ್ ಮೇಲೆ ಹತ್ತಿದ್ದು, ಇದರಿಂದ ಬಸ್ ಪಲ್ಟಿಯಾಗಿದೆ. ಗಾಯಗೊಂಡ ಪ್ರಯಾಣಿಕರಿಗೆ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾಧಿಕಾರಿ ಡಾ. ಕುಮಾರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿದ್ದರೆ ಅವರನ್ನು ಮಿಮ್ಸ್ ಅಥವಾ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.ಇದನ್ನು ಓದಿ –ಪಿಎಂ ಜನ್ ಮನ್ ಯೋಜನೆಗೆ ಮಂಡ್ಯ ಪೂವನಹಳ್ಳಿ ಗ್ರಾಮ ಆಯ್ಕೆ
ಅದು ಯಾವುದೇ ಖಾಸಗಿ ಆಸ್ಪತ್ರೆಯಾದರೂ, ಅಲ್ಲಿನ ಚಿಕಿತ್ಸಾ ವೆಚ್ಚವನ್ನು ಕೆಎಸ್‌ಆರ್‌ಟಿಸಿ ಭರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
More Stories
ಇಂಡಿಯನ್ ಆಯಿಲ್ ಲಿಮಿಟೆಡ್ನಲ್ಲಿ 456 ಅಪ್ರೆಂಟಿಸ್ ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ
ಇಂದಿನಿಂದಲೇ ಬಿಯರ್ ದರ ಹೆಚ್ಚಳ – ಹೊಸ ಬೆಲೆ ವಿವರ !
ಮೈಸೂರಿನಲ್ಲಿ ಹೊಸ ಹೋಟೆಲ್ ಆರಂಭಿಸಲು ತಾಜ್ ಗ್ರೂಪ್ ಸಿದ್ಧ