ಬೆಂಗಳೂರು: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಚಿನ್ನಾಭರಣ ದೋಚಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರು:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಗಣೇಶ್ ಮತ್ತು ಶರವಣ ಅವರನ್ನು ಬಂಧಿಸಿದ್ದಾರೆ. ಇಬ್ಬರೂ ಕೆ.ಆರ್. ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ವಿವರ:
ಕಳೆದ ಭಾನುವಾರ ರಾತ್ರಿ 11:30ರ ಸುಮಾರಿಗೆ, ತಮಿಳುನಾಡಿನಿಂದ ಬಂದ ಮಹಿಳೆ ಯಲಹಂಕಕ್ಕೆ ತೆರಳಲು ಕೆ.ಆರ್. ಮಾರ್ಕೆಟ್ ಬಳಿ ಬಸ್‌ಗಾಗಿ ಕಾಯುತ್ತಿದ್ದರು. ಯಲಹಂಕ ಕಡೆಗೆ ಬಸ್ ಬಾರದ ಕಾರಣ, ಬಸ್ ಬರುವ ಸ್ಥಳವನ್ನು ತಿಳಿದುಕೊಳ್ಳಲು ಮಹಿಳೆ ಮಾತನಾಡಿದ್ದಾರೆ.
ಅವರು ಬಸ್ ಬರುವ ಜಾಗ ತೋರಿಸಿಕೊಳ್ಳುವುದಾಗಿ ಹೇಳಿ, ಮಹಿಳೆಯನ್ನು ಬಸ್ ನಿಲ್ದಾಣದ ಸಮೀಪದ ಗೋಡೌನ್ ಸ್ಟ್ರೀಟ್‌ಗೆ ಕರೆದೊಯ್ದು, ಅತ್ಯಾಚಾರ ನಡೆಸಿದ್ದಾರೆ. ಬಳಿಕ ಮಹಿಳೆಯ ಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಸಂತ್ರಸ್ತೆ ಮಹಿಳೆ ಬೆಂಗಳೂರು ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಇದನ್ನು ಓದಿ –Mandya : KSRTC ಬಸ್ ಪಲ್ಟಿಯಾಗಿ 30 ಪ್ರಯಾಣಿಕರಿಗೆ ಗಾಯ
ಮಹಿಳೆಯ ದೂರು ಪಡೆದು, ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಕ್ಷಣವೇ ಇಬ್ಬರು ಆರೋಪಿಗಳನ್ನು ಹಿಡಿಯಲು ಎರಡು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
More Stories
ಇಂಡಿಯನ್ ಆಯಿಲ್ ಲಿಮಿಟೆಡ್ನಲ್ಲಿ 456 ಅಪ್ರೆಂಟಿಸ್ ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ
ಇಂದಿನಿಂದಲೇ ಬಿಯರ್ ದರ ಹೆಚ್ಚಳ – ಹೊಸ ಬೆಲೆ ವಿವರ !
ಮೈಸೂರಿನಲ್ಲಿ ಹೊಸ ಹೋಟೆಲ್ ಆರಂಭಿಸಲು ತಾಜ್ ಗ್ರೂಪ್ ಸಿದ್ಧ