ನನ್ನ ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ, ಮಂಡ್ಯ ದತ್ತುಕೊಟ್ಟಿಲ್ಲ – ಸಚಿವ ಚಲುವರಾಯಸ್ವಾಮಿ

Team Newsnap
1 Min Read

ಮಂಡ್ಯ : ರಾಜಕೀಯವಾಗಿ ನನ್ನನ್ನು ತುಳಿಯೋ ಉದ್ದೇಶದಿಂದ ವ್ಯವಸ್ಥಿತವಾಗಿ ಷಡ್ಯಂತ್ರ ಹಾಗೂ ಪಿತೂರಿಯನ್ನು ನನ್ನ ವಿರುದ್ಧ ನಡೆಸಲಾಗುತ್ತಿದೆ. ಆದ್ರೇ ರಾಜಕೀಯವಾಗಿ ನನ್ನ ಮುಗಿಸಲು ಸಾಧ್ಯವಿಲ್ಲ ಎಂಬುದಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

“ನನ್ನನ್ನೇ ಗುರಿಯಾಸಿಕೊಂಡು ನಡುಯತ್ತಿರುವ ಈ ಕುತಂತ್ರದ ಹಿಂದೆ ಯಾರಿರಬಹುದು ಎಂದು ಅವರ ಹೆಸರು ಹೇಳುವ ಅವಶ್ಯಕತೆಯಿಲ್ಲ. ಜನರು ರಾಜಕೀಯವಾಗಿ ಪ್ರಬುದ್ಧರಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವುದು ಯಾರೆಂದು ಅವರೇ ನಿರ್ಧಾರ ಮಾಡುತ್ತಾರೆ” ಎಂದು ಚಲುವರಾಯಸ್ವಾಮಿ ಗುಡುಗಿದರು.

ಸರ್ಕಾರಗಳ ಬದಲಾವಣೆ ಆದಾಗ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಸಾಮಾನ್ಯವಾದದ್ದು. ಇದು ಎಲ್ಲಾ ಹೊಸ ಸರ್ಕಾರ ಬಂದಾಗಲೂ ಸಹಜವಾಗಿ ನಡೆಯುತ್ತದೆ. ಆದರೇ ವೈಯಕ್ತಿಕವಾಗಿ ನಾನು ಮೊದಲಿನಿಂದಲೂ ಈ ಪ್ರಕ್ರಿಯೆಯಯಲ್ಲಿ ಹೆಚ್ಚಿನ ಗಮನ ಕೊಟ್ಟಿಲ್ಲ ಎಂದರು.

ನನ್ನ ಬಗ್ಗೆ ದ್ವೇಷ ಹೊಂದಿರುವ ಜನ ಹೇಗಾದರೂ ನನ್ನ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವ ಪ್ರಯತ್ನದ ಭಾಗವಾಗಿ ನಕಲಿ ಪತ್ರಗಳನ್ನು ಸೃಷ್ಠಿಸಿ, ಅದರ ಆಧಾರದ ಮೇಲೆ ನೌಕರರನ್ನು ಸೆಪವಾಗಿಸಿ ಷಡ್ಯಂತ್ರ ರೂಪಿಸುತ್ತಿದ್ದಾರೆ. ಈ ಷಡ್ಯಂತ್ರದ ಹಿಂದಿರುವವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.
ನಾಡಹಬ್ಬ ಮೈಸೂರು ದಸರಾ : 9 ಗಜಪಡೆಗಳ ಪಟ್ಟಿ ಬಿಡುಗಡ

ಮಂಡ್ಯ ಯಾರಿಗೂ ದತ್ತುಕೊಟ್ಟಿಲ್ಲ. ಒಕ್ಕಲಿಗರ ಏಳ್ಗೆ ಸಹಿಸದೇ ಈ ರೀತಿ ಆರೋಪ ಮಾಡಲಾಗುತ್ತಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂಬುದಾಗಿ ಗುಡುಗಿದ್ದಾರೆ.

Share This Article
Leave a comment