ಮಂಡ್ಯ: XUV 700 ಕಾರಿನ ಆಸೆಗೆ ತೋರಿಸಿ ಲಕ್ಷ ಲಕ್ಷ ರು ಕಳೆದಕೊಂಡ ರೈತ

Team Newsnap
1 Min Read

ನ್ಯೂ ಇಯರ್ ಆಫರ್​ನಲ್ಲಿ ಮಿಶೋ ಆ್ಯಪ್​ ಮೂಲಕ ಆನ್​ಲೈನ್​ಲ್ಲಿ ಕೆಲ ವಸ್ತುಗಳನ್ನು ಖರೀದಿಸಿದ ಕೆಲವೇ ದಿನಗಳಲ್ಲಿ ಸಂಜೀವ್ ಗೌಡರ ಮನೆಗೆ ಪೋಸ್ಟಲ್ ಮೂಲಕ ಒಂದು ಕೂಪನ್​ ಕಳುಹಿಸಿದ್ದ ಸೈಬರ್ ಚೋರರು ಕೂಪನ್​ನನ್ನು ಸ್ಕ್ರ್ಯಾಚ್ ಮಾಡಿ ನೋಡಿದಾಗ ಮಹೇಂದ್ರ XUV 700 ಗೆದ್ದಿರುವುದಾಗಿ ಬಿಂಬಿಸಿದ್ದಾರೆ. ಲಕ್ಕಿ ಡ್ರಾದಲ್ಲಿ ನೀವು ಕಾರನ್ನು ಗೆದ್ದಿರುವುದಾಗಿ ಸಂಪರ್ಕಿಸಿದ್ದಾರೆ ಸೈಬರ್ ಖದೀಮರು.

ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಸಂಜೀವ್ ಗೌಡ ಎಂಬುವವರು ವಂಚನೆಗೆ ಒಳಗಾದವರು.ಎಸಿ ರೂಂನಲ್ಲಿ ನಾಯಿ ಸಾಕಲು ಕಾಂಗ್ರೆಸ್ ಕರೆಂಟ್ ಕೊಡುತ್ತಾ? ಇಬ್ರಾಹಿಂ ಪ್ರಶ್ನೆ

ಕಾರು ಬೇಕಾ ಅಥವ ಹಣ ಬೇಕಾ ಎಂದು ಪ್ರಶ್ನಿಸಿದ್ದಾರೆ. ಹಣ ಬೇಕೆಂದು ಸಂಜೀವ ಗೌಡ ತಿಳಿಸಿದಾಗ 29 ಲಕ್ಷದ 60 ಸಾವಿರ ನಕಲಿ ಚೆಕ್​ನ್ನು ವಾಟ್ಸಪ್ ಮೂಲಕ ಕಳುಹಿಸಿದ್ದಾರೆ. ಹಣ ಖಾತೆಗೆ ವರ್ಗಾವಣೆ ಮಾಡಬೇಕಾದರೆ ಕೆಲ ಚಾರ್ಜಸ್ ನೀಡಬೇಕೆಂದು ಪುಸಲಾಯಿಸಿದ್ದ ವಂಚಕರು ಅವರ ಮಾತನ್ನು ನಂಬಿ ಮನೆಯಲ್ಲಿದ್ದ ಚಿನ್ನಾಭರಣ ಗಿರವಿ ಇಟ್ಟು ಸೈಬರ್ ಚೋರರ ಖಾತೆಗೆ ಹಂತ ಹಂತವಾಗಿ 7ಲಕ್ಷದ 23 ಸಾವಿರ ಹಣ ಹಾಕಿದ್ದಾರೆ. ಪದೇ ಪದೇ ಹಣ ಪೀಕಿದ್ದರಿಂದ ಅನುಮಾನಗೊಂಡ ಸಂಜೀವ್ ಗೌಡ ಮಂಡ್ಯದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತ ಹಣವೂ ಇಲ್ಲದೆ ಅತ್ತ ಕಾರು ಸಿಗದೆ ಸಂಜೀವ್ ಗೌಡ ಹಾಗೂ ಆತನ ಪತ್ನಿ ಪರಿತಪ್ಪಿಸುತ್ತಿದ್ದಾರೆ. ಸದ್ಯ ಸೈಬರ್ ಚೋರರಿಗಾಗಿ ಪೊಲೀಸರಿಂದ ಶೋಧಕಾರ್ಯ ಆರಂಭ ಮಾಡಿದ್ದಾರೆ

ಕೊಲ್ಕತ್ತಾದಿಂದ ಕರೆ ಮಾಡಿ ವಂಚಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

Share This Article
Leave a comment