ಎಸಿ ರೂಂನಲ್ಲಿ ನಾಯಿ ಸಾಕಲು ಕಾಂಗ್ರೆಸ್ ಕರೆಂಟ್ ಕೊಡುತ್ತಾ? ಇಬ್ರಾಹಿಂ ಪ್ರಶ್ನೆ

Team Newsnap
1 Min Read
Is Congress giving electricity to keep dog in AC room? Ibrahim's question ಎಸಿ ರೂಂನಲ್ಲಿ ನಾಯಿ ಸಾಕಲು ಕಾಂಗ್ರೆಸ್ ಕರೆಂಟ್ ಕೊಡುತ್ತಾ? ಇಬ್ರಾಹಿಂ ಪ್ರಶ್ನೆ

ಬಡ ಜನರಿಗೆ, ರೈತರಿಗೆ ಉಚಿತ ವಿದ್ಯುತ್ ಕೊಡದ ಈ ಕಾಂಗ್ರೆಸ್ ನವರು ಎಸಿ ರೂಂನಲ್ಲಿ ನಾಯಿ ಸಾಕೋರಿಗೆ 200 ಯುನಿಟ್ ಪ್ರೀ ಕರೆಂಟ್ ಕೊಡ್ತೀರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಂಗಳವಾರ ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವೇಳೆ ಕಾಂಗ್ರೆಸ್‌ನ 200 ಯುನಿಟ್ ವಿದ್ಯುತ್ ಘೋಷಣೆ ಮತ್ತು 2 ಸಾವಿರ ಗೃಹಿಣಿಯರಿಗೆ ಹಣ ಘೋಷಣೆಗೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ ಅವರು, ಚುನಾವಣೆಯಲ್ಲಿ ಮತ ಪಡೆಯಲು ಈ ರೀತಿಯ ಆಶ್ವಾಸನೆ ನೀಡುತ್ತಿದ್ದಾರೆ. ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸ್‌ಗಢದಲ್ಲಿ ಅವರ ಸರ್ಕಾರವೇ ಇದೆ. ಅಲ್ಲಿ ಮಾಡಿ ತೋರಿಸಬೇಕಿತ್ತು.

ಅವರು ಅಲ್ಲಿ ಮಾಡದೇ ಇಲ್ಲಿ‌ ಹೇಗೆ ಮಾಡುತ್ತಾರೆ. ಇವೆಲ್ಲ ಚುನಾವಣೆ ಗಿಮಿಕ್ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.ದೊಡ್ಡಬಳ್ಳಾಪುರದಲ್ಲಿ ದುರಂತ : ಮರದಿಂದ ಕೆಳಗೆ ಬಿದ್ದು ಯುವಕ ಸಾವು

ರೈತರಿಗೆ ವಿದ್ಯುತ್ ಕೊಡುವುದಕ್ಕೆ ಆಗುವುದಿಲ್ಲ ನಿಮಗೆ. ನಗರದಲ್ಲಿ ಎಸಿ ರೂಂನಲ್ಲಿ ನಾಯಿ ಸಾಕಲು ಕರೆಂಟ್ ಕೊಡುತ್ತೀರಾ. ಬರೀ‌ ನಗರ ಪ್ರದೇಶದ ಜನರಿಗೆ ಕೊಟ್ಟರೆ ಹಳ್ಳಿ ಜನರಿಗೆ ಏನ್ ಕೊಡ್ತೀರಾ? ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ‌ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಏನು ಮಾಡದೆ ಈಗ ಇಲ್ಲಿ ಮಾಡುತ್ತೇವೆ ಎನ್ನುತ್ತಾರೆ. ಗೃಹಲಕ್ಷ್ಮಿ, ಸಂತಾನ ಲಕ್ಷ್ಮಿ, ಅಷ್ಠಲಕ್ಷ್ಮಿ ಎಲ್ಲಾ ಮೊದಲು ಅಧಿಕಾರ ಇರುವ ರಾಜ್ಯದಲ್ಲಿ ‌ಮಾಡಿ ತೋರಿಸಿ. ಆ ಮೇಲೆ ಇಲ್ಲಿ ಮಾಡುವರಂತೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್, ಬಿಜೆಪಿ ಸರ್ಕಾರ ಬಂದಾಗ ರಾಜ್ಯದಲ್ಲಿ ದರಿದ್ರ ಲಕ್ಷ್ಮಿ ಬರುತ್ತದೆ. ಕಾಂಗ್ರೆಸ್ ಅವರು 120 ರಿಂದ 70ಕ್ಕೆ ಬಂದರೂ ಈಗ 58ಕ್ಕೆ ಕಾಂಗ್ರೆಸ್ ಇಳಿಯುತ್ತದೆ ಎಂದು ಭವಿಷ್ಯ ನುಡಿದರು.

Share This Article
Leave a comment