ಮಂಡ್ಯ ಡಿಸಿಸಿ ಬ್ಯಾಂಕ್‌ ಚುನಾವಣೆ: ಕಾಂಗ್ರೆಸ್ ಗೆ ಹೆಚ್ಚು ಸ್ಥಾನ

Team Newsnap
3 Min Read

ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಡಿಸಿಸಿ ಬ್ಯಾಂಕ್ ) 12 ನಿರ್ದೇಶಕರ ಸ್ಥಾನಗಳ ಪೈಕಿ ಉಳಿದಿದ್ದ 9 ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಜಯ ಸಾಧಿಸಿದೆ. ಡಿಸಿಸಿ ಬ್ಯಾಂಕ್ ನಲ್ಲಿ ಅಧಿಕಾರ ಹಿಡಿಯಲು ನಿಚ್ಚಳ ಬಹುಮತವೂ ಸಿಕ್ಕಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸ್ಪರ್ಧೆ ಏರ್ಪಟ್ಟು ಕಾಂಗ್ರೆಸ್ 7 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಏರಿದೆ. ಜೆಡಿಎಸ್‌ 5 ಸ್ಥಾನಗಳನ್ನು ಪಡೆದುಕೊಂಡಿದೆ. ಮೂರು ಸ್ಥಾನಗಳು ಈಗಾಗಲೇ ಅವಿರೋಧ ಆಯ್ಕೆಯಾಗಿವೆ.

ನಗರದ ಶ್ರೀ ಲಕ್ಷ್ಮಿಜನಾರ್ಧನ ಶಾಲೆಯಲ್ಲಿ ಬೆಳಿಗ್ಗೆ 9 ರಿಂದ 4ರವರೆಗೆ ಚುನಾವಣೆ ನೆಡೆಯಿತು.ನಂತರ ಎಣಿಕೆ ಕಾರ್ಯ ನೆಡೆಯಿತು.

ಚುನಾವಣಾ ಫಲಿತಾಂಶ:

  1. ಮಂಡ್ಯ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಸಿ.ಅಶ್ವಥ್(25) ಸತೀಶ್(21).
  2. ಮದ್ದೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಪಿ.ಸಂದರ್ಶ(34), ಎಂ.ಹೊನ್ನೇಗೌಡ.(11)
  3. ಮಳವಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ,(26) ವಿ.ಎಂ.ವಿಶ್ವನಾಥ್.(05)
  4. ಶ್ರೀರಂಗಪಟ್ಟಣ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಪಿ.ಎಸ್.ಚಂದ್ರಶೇಖರ್, (19)ಎಸ್.ಎಂ.ಮಲ್ಲೇಶ್.(03)
  5. ಕೆ.ಆರ್.ಪೇಟೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಎಚ್.ಕೆ.ಅಶೋಕ,(29) ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್.(09)
  6. ನಾಗಮಂಗಲ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಎಚ್.ಎಸ್.ನರಸಿಂಹಯ್ಯ,(09) ಎಚ್.ರಮೇಶ್.(05)
  7. ಮಂಡ್ಯ ಜಿಲ್ಲೆಯಲ್ಲಿನ ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳು ಮತ್ತು ನಗರ ಸಹಕಾರಿ ಬ್ಯಾಂಕ್ ಹಾಗೂ ವ್ಯವಸಾಯೇತ್ತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಎಚ್.ಅಶೋಕ್,(67) ಕೆ.ಎಲ್.ದೊಡ್ಡಲಿಂಗೇಗೌಡ, (39)
  8. ಮಂಡ್ಯ ಉಪ ವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರ: ಎಚ್.ಸಿ.ಕಾಳೇಗೌಡ,(157) ರಾಮಕೃಷ್ಣ(.107)
  9. ಮಂಡ್ಯ ಜಿಲ್ಲೆಯಲ್ಲಿನ ಕೈಗಾರಿಕಾ ಸಹಕಾರ ಸಂಘಗಳು(ನೇಕಾರರ ಸಹಕಾರ ಸಂಘಗಳು ಸೇರಿದಂತೆ) ಕಾರ್ಮಿಕ ಸಹಕಾರ ಸಂಘಗಳು ಮತ್ತು ಇನ್ನಿತರೆ ಸಹಕಾರ ಸಂಘಗಳ ಕ್ಷೇತ್ರ: ಕೆ.ಸಿ.ಜೋಗೀಗೌಡ(,92) ಎಂ.ಬಿ.ಬಸವರಾಜು(,06) ಲಿಂಗರಾಜು.(1)
df81371f f5ae 4115 ba7f d03a26cd0ac9

9 ಸ್ಥಾನಗಳಿಗೆ 9 ಮತಗಟ್ಟೆ ಹಾಗೂ ಹೆಚ್ಚುವರಿಯಾಗಿ ಒಂದು ಕೋವಿಡ್‌ ಮತಗಟ್ಟೆಯನ್ನು ತೆರೆಯಲಾಗಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಒಂದು ಮತಗಟ್ಟೆಗೆ 4 ಅಧಿಕಾರಿಗಳಂತೆ 10 ಮತಗಟ್ಟೆಗೆ 40 ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿತ್ತು.

  • ಮೊದಲ ಬಾರಿಗೆ ಗೆದ್ದವರೇ ಹೆಚ್ಚು.
  • ಮಾಜಿ ಶಾಸಕ ನರೇಂದ್ರ ಸ್ವಾಮಿ ಮೊದಲ ಬಾರಿಗೆ ಸಹಕಾರ ಕ್ಷೇತ್ರಕ್ಕೆ ಭಾರಿ ಗೆಲುವಿನೊಂದಿಗೆ ಪಾದಾರ್ಪಣೆ.
  • ಡಿ ಸಿ ಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್ ಗೆ ಭಾರಿ ಸೋಲು.
  • ಮೇಲುಕೋಟೆ ಕ್ಷೇತ್ರದಲ್ಲಿ ಮಾತ್ರ ಶಾಸಕ ಪುಟ್ಟರಾಜು ಕಸರತ್ತು. ಆ ತಾಲೂಕಿನಲ್ಲಿ ಇಬ್ಬರು ನಿರ್ದೇಶಕರ ಅವಿರೋಧ ಆಯ್ಕೆಯೇ ಜೆಡಿಎಸ್ ಗೆ ಲಾಭ
  • ಕದಲೂರ ರಾಮಕೃಷ್ಣ, ‌ ಸಾತನೂರು ಸತೀಶ್, ವಿ ಡಿ ಹರೀಶ್ ಗೆ ಸೋಲು.
  • ಗೆದ್ದವರ ಅಧಿಕಾರ ಅವಧಿ 5 ವರ್ಷ.
bcf7cdb5 f370 41d2 9d9b 300f17967d19

ಗೆದ್ದವರು ಯಾರು?

1)ನಾಗಮಂಗಲ ನರಸಿಂಹಯ್ಯ

2)ಮದ್ದೂರು ಸಂದರ್ಶ

3)ಮಳವಳ್ಳಿ ನರೇಂದ್ರಸ್ವಾಮಿ.

4)ಶ್ರೀರಂಗಪಟ್ಟಣ ಚಂದ್ರಶೇಖರ್.

5) ಕೆ ಆರ್ ಪೇಟೆ ಅಶೋಕ್

6)ಮಂಡ್ಯ ಉಪ ವಿಭಾಗ ಕಾಳೇಗೌಡ.

7)ಕೈಗಾರಿಕಾ ಕ್ಷೇತ್ರ ಜೋಗಿ ಗೌಡ.

8)ಸಹಕಾರ ಬಳಕೆದಾರರ ಕ್ಷೇತ್ರ ಅಶೋಕ್.

9)ಮಂಡ್ಯ ಅಶ್ವಥ್.

ಬಹುಮತ ಡೋಲಾಯಮಾನ

ಡಿ ಸಿ ಸಿ ಬ್ಯಾಂಕ್ ಲ್ಲಿ ಅಧಿಕಾರ ಹಿಡಿಯಲು ಜೆ ಡಿ ಎಸ್ ಗೂ ಅವಕಾಶವಿದೆ.
ಜೆ ಡಿ ಎಸ್ 5 ಸ್ಥಾನಗಳನ್ನು ಪಡೆದುಕೊಂಡಿದೆ .3 ಸ್ಥಾನಗಳನ್ನು ಸರ್ಕಾರ ಬಿ ಜೆ ಪಿ ಕಾರ್ಯಕರ್ತರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಿದೆ. ಇಬ್ಬರು ಅಧಿಕಾರಿಗಳ ಮತಗಳು ಇವೆ. ಇದರಿಂದ ಒಂದು ವೇಳೆ ಜೆ ಡಿ ಎಸ್
ಬಿ ಜೆ ಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ, ಜೆ ಡಿ ಎಸ್ ಕೂಡ
ಡಿ ಸಿ ಸಿ ಬ್ಯಾಂಕ್ ನಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Share This Article
Leave a comment