ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ: ಮಾಜಿ ಸಿಎಂ ಕುಮಾರಸ್ವಾಮಿ ಎಂಟ್ರಿ

Team Newsnap
3 Min Read
  • ಜೆಡಿಎಸ್ – ಬಿಜೆಪಿ ಮೈತ್ರಿಗೆ ಸಿಎಂ ಯಡಿಯೂರಪ್ಪ ಗ್ರೀನ್ ಸಿಗ್ನಲ್
  • ಡಿಸಿಸಿ ಬ್ಯಾಂಕ್ ಚುನಾವಣೆಯ ಚಿತ್ರಣವೇ ಬದಲಾಗುವ ಸಾಧ್ಯತೆ
  • ಮತದಾನದ ಅನುಕೂಲಕ್ಕೆ ಮಂಡ್ಯ ಡಿ ಆರ್, ಅರಸ್ ಎತ್ತಂಗಡಿ
  • ಮಂಡ್ಯ ಎ ಆರ್ ಶಂಕರ್ ಈಗ ಪ್ರಭಾರ ಡಿ ಆರ್ ಗೆ ಮತದಾನದ ಹಕ್ಕು
  • ಕಾಂಗ್ರೆಸ್ ನಿಂದ ಒಬ್ಬ ಸದಸ್ಯನನ್ನು ಜೆಡಿಎಸ್ ಗೆ ಜಂಪ್ ಮಾಡಿಸಲು ಭಾರಿ ಕಸರತ್ತು
  • ಯಡಿಯೂರಪ್ಪ – ಕುಮಾರಸ್ವಾಮಿ ಸೇರಿ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ
  • ಅಫೆಕ್ಸ್ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೂ ಸಿಎಂ, ಮಾಜಿ ಸಿಎಂ ಸೇರಿ ನಿರ್ಧಾರ

ಮಂಡ್ಯ ಡಿಸಿಸಿ ಬ್ಯಾಂಕ್ ಗದ್ದುಗೆಗೆ ತೀವ್ರ ಜಿದ್ದಾಜಿದ್ದಿ ನಡೆದಿದೆ. ಯಾವುದೇ ಕಾರಣಕ್ಕೂ ಡಿಸಿಸಿ ಬ್ಯಾಂಕ್ ನಲ್ಲಿ ಕಾಂಗ್ರೆಸ್ ಅಧಿಕಾರ ಸೂತ್ರ ಹಿಡಿಯುವುದನ್ನು ತಪ್ಪಿಸಲು ಬಿಜೆಪಿ- ಹಾಗೂ ಜೆಡಿಎಸ್ ತಂತ್ರಗಾರಿಕೆ ಮಾಡಿವೆ.‌

ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯು ನ.17 ರಂದು ನಡೆಯಲಿದೆ.

dcc bank

ಕಳೆದ 6 ರಂದು 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರು 8, ಜೆಡಿಎಸ್ ಬೆಂಬಲಿಗರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದ್ದರೂ 4 ಸ್ಥಾನ ಗಳಿಸಿರುವ ಜೆಡಿಎಸ್ ಬಿಜೆಪಿ ಜತೆಗೂಡಿ ಹಾಗೂ ಕಾಂಗ್ರೆಸ್ ನ ಅತೃಪ್ತ ನಿರ್ದೇಶಕರನ್ನು ತನ್ನತ್ತ ಸೆಳೆದು ಅಧಿಪತ್ಯ ಸ್ಥಾಪಿಸಲು ಪ್ರತಿತಂತ್ರ ರೂಪಿಸುತ್ತಿದೆ.

ಕಾಂಗ್ರೆಸ್ ನ ಒಬ್ಬ ಸದಸ್ಯ ಯಾರು ಎಂಬುದು ಮಾತ್ರ ನಿಗೂಢವಾಗಿದೆ. ಅಮರಾವತಿ ಅಶ್ವತ್ಥ ನಮ್ಮ ಸದಸ್ಯ ರೆಂದು ಜೆಡಿಎಸ್ ಮೂಲ ಗಳು ಹೇಳಿಕೊಂಡಿವೆ.

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಹಾಗೂ ಮಾಜಿ ಸಚಿವ ಪುಟ್ಟರಾಜು ಸೇರಿದಂತೆ ಪ್ರಮುಖ ಜೆಡಿಎಸ್ ನಾಯಕರುಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಡಿಸಿಸಿ ಬ್ಯಾಂಕ್ ಅಧಿಕಾರ ಸೂತ್ರ ಕುರಿತಂತೆ ಮಾತುಕತೆ ನಡೆಸಿ ಒಮ್ಮತ ನಿರ್ಧಾರ ಕ್ಕೆ ಬಂದಿದ್ದಾರೆಂದು ಜೆಡಿಎಸ್ ಮೂಲ ಗಳು ಹೇಳಿವೆ

ಮುಖ್ಯಮಂತ್ರಿಗಳೂ ಕೂಡ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಹಣಿಯಲು ಗ್ರೀನ್ ಸಿಗ್ನಲ್ ಕೊಟ್ಟು ಪೂರಕ ಸಹಕಾರ. ನೀಡಿದ್ದಾರೆ.

ಡಿ ಆರ್ ಅರಸ್ ಎತ್ತಂಗಡಿ !

ಮಂಡ್ಯ ಜಿಲ್ಲಾ ರಿಜಿಸ್ಟ್ರಾರ್ ವಿಕ್ರಮ್ ರಾಜ್ ಅರಸ್ ರವರನ್ನು ರಾಜ್ಯ ಸರ್ಕಾರ ಶುಕ್ರವಾರ ಸಂಜೆ ದಿಢೀರ್ ಎತ್ತಂಗಡಿ ಮಾಡಲಾಗಿದೆ. ಅರಸ್ ಸ್ಥಾನಕ್ಕೆ ಮಂಡ್ಯ ಎ ಆರ್, ಶಂಕರ್ ರವರಿಗೆ ಅಧಿಕಾರ ಹಸ್ತಾಂತರ ಮಾಡಲಾಗಿದೆ.

ಜೆಡಿಎಸ್ – ಬಿಜೆಪಿ ಮೈತ್ರಿ ಶಕೆ ಮತ್ತೆ ಆರಂಭ ?

ಕಾಂಗ್ರೆಸ್ ನ‌ ಅತೃಪ್ತ ಸದಸ್ಯ ನನ್ನು‌ ಸೇರಿಸಿಕೊಂಡು ಜೆಡಿಎಸ್ 5 ಸ್ಥಾನಗಳನ್ನು ಪಡೆದುಕೊಂಡಿದೆ. ಜೊತೆ ಸರ್ಕಾರದ ವತಿಯಿಂದ 3 ನಾಮಿನಿಗಳ ನೆರವಿನೊಂದಿಗೆ (ಡಿಆರ್, ಅಫೆಕ್ಸ್ ಬ್ಯಾಂಕ್ ನ ಅಧಿಕಾರಿ ಹಾಗೂ ಬಿಜೆಪಿ ನೇಮಕ ಮಾಡುವ ಸದಸ್ಯ ಸೇರಿ) ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಧಿಕಾರ ಹಿಡಿಯುವ ಸೂತ್ರ ಕ್ಕೆ ಮಂಡ್ಯ ದಿಂದಲೇ ಚಾಲನೆ ನೀಡುವ ಸಂಕಲ್ಪ ಮಾಡಲಾಗಿದೆ.

ಈ ಎಲ್ಲಾ ಬಿರುಸಿನ ಚಟುವಟಿಕೆಗಳನ್ನು ಗಮನಿಸಿದರೆ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಡಿಸಿಸಿ ಬ್ಯಾಂಕ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಅಶ್ವತ್ಥ ಜೆಡಿಎಸ್ ನತ್ತ ಒಲವು?

ಈ ನಡುವೆ ಜೆಡಿಎಸ್, ಸಿ.ಅಶ್ವತ್ಥ್ ನಮ್ಮ ಬೆಂಬಲಕ್ಕೆ ಇದ್ದಾರೆ ಎಂದು ರಾಜಾರೋಷವಾಗಿ ಹೇಳುತ್ತಿದೆ. ಆದರೆ ಮೊನ್ನೆ ಬುಧವಾರ ಬೆಂಗಳೂರಿನಲ್ಲಿ ಕೆಪಿಸಿಸಿ‌ ಅಧ್ಯಕ್ಷ ರ ಭೇಟಿ ವೇಳೆ ಕಾಂಗ್ರೆಸ್ ಸಭೆಯಲ್ಲಿ ಸಿ.ಅಶ್ವತ್ಥ್ ಭಾಗಿಯಾಗಿದ್ದರಿಂದ ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ನ.17ರಂದು ರಾಜಕೀಯ ಮೇಲಾಟದ ಜೊತೆಗೆ ಕಾಂಗ್ರೆಸ್ ಅಥವಾ ಜೆಡಿಎಸ್ – ಬಿಜೆಪಿ ಜಂಟಿ ತಂತ್ರಗಾರಿಕೆ ಗಳು ಯಾವ ರೀತಿ ‌ಬದಲಾವಣೆ ತಂದು ಕೊಡುತ್ತವೆ ಎನ್ನುವುದು ಕಾದುನೋಡಬೇಕಿದೆ.

Share This Article
Leave a comment