ಮಾ 11, ಏ 1 ರಂದು ಎರಡು ಬಾರಿ ಹಾಲಿನ ದರ ಹೆಚ್ಚಳಕ್ಕೆ ನಿರ್ಧಾರ ಮಾಡಿದ ಮನ್ ಮುಲ್ – ರಾಮಚಂದ್ರ

Team Newsnap
1 Min Read

ರೈತರು ಒಕ್ಕೂಟಕ್ಕೆ ಸರಬರಾಜು ಮಾಡುವ ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್ ಹಾಲಿಗೆ 1.50 ಹೆಚ್ಚಳ ಮಾಡಲಾಗಿದೆ

ಮನ್ ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ ಈ ವಿಷಯ ತಿಳಿಸಿ, ‌ಹಾಲು ಖರೀದಿ ದರವನ್ನು ಎರಡು ಬಾರಿ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದರು.

ಮಾ.11 ರಿಂದ ಪ್ರತಿ ಲೀಟರ್ ಹಾಲಿಗೆ 1.50 ಹೆಚ್ಚಳ ಮಾಡಲಾಗಿದೆ.‌ ಈ ಆದೇಶ ಮಾ.31 ವರೆಗೆ ಜಾರಿಯಲ್ಲಿರುತ್ತದೆ ಏ.1 ರಿಂದ ಮತ್ತೆ ಹಾಲಿನ ಖರೀದಿ ದರವನ್ನು 2 ರೂಪಾಯಿ ಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ, ಹೀಗಾಗಿ ಹಾಲು ಉತ್ಪಾದಕರ ಸಂಘಗಳ ಮೂಲಕ ಒಕ್ಕೂಟಕ್ಕೆ ಸರಬರಾಜು ಮಾಡುವ ಶೇ 3.5 ಜಿಡ್ಡಿನಾಂಶವುಳ್ಳ ಪ್ರತಿ ಲೀಟರ್ ಹಾಲಿಗೆ 26 ರೂಪಾಯಿ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.

ಈಗ ಮಾರುಕಟ್ಟೆಯಲ್ಲಿ ಹಾಲಿನ ಮಾರಾಟ ಹೆಚ್ಚಳ ಆಗುತ್ತಿದೆ. ಒಕ್ಕೂಟದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಬರುತ್ತಿದೆ ಹೀಗಾಗಿ ರೈತರ ಮತ್ತು ಹಾಲು ಉತ್ಪಾದಕರ ಸಂಘಗಳ ಹಿತದೃಷ್ಟಿಯಿಂದ ಹಾಲಿನ ಖರೀದಿ ದರವನ್ನು ಹೆಚ್ಚಳ ಮಾಡಲಾಗಿದೆ ಎಂದರು.

ಸುದ್ದಿಗೊಷ್ಟಿಯಲ್ಲಿ ಉಪಾಧ್ಯಕ್ಷ ರಘುನಂದನ್ , ನಿರ್ದೇಶಕರಾದ ಕೆ.ರಾಮಚಂದ್ರ , ಮಂಜು ಹೆಚ್.ಟಿ , ನೆಲ್ಲಿಗೆರೆ ಬಾಲು , ರೂಪ , ಕೋಟೆ ರವಿ , ವ್ಯವಸ್ಥಾಪಕ ನಿರ್ದೇಶಕ ಗೋವಿಂದೇಗೌಡ , ಸಾಗರ್ ಉಪಸ್ಥಿತರಿದ್ದರು.

Share This Article
Leave a comment