ಮಳವಳ್ಳಿಯಲ್ಲಿ ದಿವ್ಯ ಎಂಬ ಬಾಲಕಿಯ ಮೇಲೆ ಕಿಡಿಗೇಡಿಯೊಬ್ಬ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಲಕಿ ಕುಟುಂಬಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಈಗ 10 ಲಕ್ಷ ರು ಪರಿಹಾರ ಹಣ ಬಿಡುಗಡೆ ಮಾಡಿದ್ದಾರೆ.
10 ಲಕ್ಷ ರು ಪರಿಹಾರ ಹಣ ಬಿಡುಗಡೆ ಮಾಡಿ ಸಿಎಂ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಹಣವನ್ನು ನೇರವಾಗಿ ಮಂಡ್ಯದ ಡಿಸಿ ಖಾತೆಗೆ ಕಳಿಸಲಾಗಿದೆ. ಹಾಗೆಯೇ ಈ ಪರಿಹಾರ ಹಣವನ್ನು ಕೂಡಲೇ ಮೃತ ಬಾಲಕಿ ಕುಟುಂಬಕ್ಕೆ ಕಳಿಸುವಂತೆ ಮಂಡ್ಯ ಡಿಸಿಗೆ ಆದೇಶಿಸಲಾಗಿದೆ. ಸುಪ್ರೀಂಕೋರ್ಟ್50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್ ನೇಮಕ
ಮಂಡ್ಯದ ಕೆ.ಆರ್ ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆದ ಕುಂಭಮೇಳ ಸಮಾರೋಪದಲ್ಲಿ ಮಾತನಾಡಿದ್ದ ಸಿಎಂ ಬೊಮ್ಮಾಯಿ, ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇನೆ. ಹೀಗಾಗಿ ಸೂಕ್ತ ತನಿಖೆ ನಡೆಸಿ ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದನ್ನು ಸ್ಮರಿಸಬಹುದು.
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ