ಸುಪ್ರೀಂಕೋರ್ಟ್ 50 ನೇ ​ ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್ ನೇಮಕ

Team Newsnap
1 Min Read

ಡಾ. ಜಸ್ಟೀಸ್​​ ಡಿವೈ ಚಂದ್ರಚೂಡ್ ಅವರನ್ನು ಸುಪ್ರೀಂಕೋರ್ಟ್​ನ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶಿಸಿದ್ದಾರೆ. ನವೆಂಬರ್ 10 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅಧಿಕೃತ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಡಿವೈ ಚಂದ್ರಚೂಡ್ ಅವರ ಹೆಸರನ್ನು ಸುಪ್ರೀಂಕೋರ್ಟ್​ನ ನೂತನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿತ್ತು. ಭಾರತದ 49ನೇ ಸಿಜೆಐ ಆಗಿದ್ದ ಉದಯ್ ಉಮೇಶ್ ಲಲಿತ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಹೆಸರನ್ನು 50ನೇ ಸಿಜೆಐ ಆಗಿ ನೇಮಿಸಿ ಎಂದು ಕೇಂದ್ರಕ್ಕೆ ಕಳುಹಿಸಿದ್ದರು. ಪರಿಸರ ಸ್ನೇಹಿ ಪಟಾಕಿಗೆ ಮಾತ್ರ ಅವಕಾಶ :ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಚನೆ

ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಧಿಕಾರಾವಧಿ ಎರಡು ವರ್ಷಗಳವರೆಗೆ ಇರುತ್ತದೆ. ಚಂದ್ರಚೂಡ್ 2024 ನವೆಂಬರ್ 10ನೇ ತಾರೀಖು ನಿವೃತ್ತರಾಗಲಿದ್ದಾರೆ.

Share This Article
Leave a comment