November 27, 2021

Newsnap Kannada

The World at your finger tips!

ಮಳವಳ್ಳಿ: ಕ್ಷುಲ್ಲಕ ಕಾರಣಕ್ಕಾಗಿ ಪತ್ನಿ ಕೊಲೆ ಮಾಡಿದ ಪತಿ – ಪೋಲಿಸರಿಂದ ಬಂಧನ

Spread the love

ಕೆಲ ದಿನಗಳಿಂದ ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದಳು. ಆದರೆ ಆಕೆಯನ್ನು ಪತಿಯೇ ಕೊಲೆ ಮಾಡಿರುವ ಅಂಶ ಪೊಲೀಸರ ತನಿಖೆಯಿಂದ ಪ್ರಕರಣವನ್ನು ಬೆಳಕವಾಡಿ ಪೊಲೀಸರು ಬೆಳಕಿಗೆ ತಂದಿದ್ದಾರೆ

ತಾಲೂಕು ದ್ಯಾವಪಟ್ಟಣ ಗ್ರಾಮದ ಶ್ರೀಕಂಠಸ್ವಾಮಿ ಮಗಳು ಸಂಧ್ಯಾ(22) ಶವವಾಗಿ ಪತ್ತೆಯಾಗಿರುವ ಮಹಿಳೆ.

ಕಳೆದ ಒಂದೂವರೆ ವರ್ಷದಿಂದ ಸಂಧ್ಯಾ ಮದ್ದೂರು ತಾಲ್ಲೂಕಿನ ಹಾಗಲಹಳ್ಳಿ ಗ್ರಾಮದ ಷಡಕ್ಷರಿ ಜತೆ ವಿವಾಹವಾಗಿದ್ದರು.

ಸಂಸಾರದಲ್ಲಿ ಹೊಂದಾಣಿಕೆ ಕೊರತೆ ಹಿನ್ನಲೆಯಲ್ಲಿ ಪತಿಯಿಂದ ಬೇರೆಯಾಗಿ ತವರು ಮನೆಯಲ್ಲಿ ವಾಸವಿದ್ದರು. ಪ್ರತಿದಿನ ಕೆ.ಎಂ.ದೊಡ್ಡಿಯಲ್ಲಿ ಕಂಪ್ಯೂಟರ್ ತರಬೇತಿ ಹೋಗಿ ಬರುತ್ತಿದ್ದ ಸಂಧ್ಯಾ ನ.16ರಂದು ಕಾಣೆಯಾಗಿದ್ದರು.

ಈ ಸಂಬಂಧ ನ.17ರಂದು ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ತಂದೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಈ ವೇಳೆ ತನಿಖೆ ಕೈಗೊಂಡ ಪೊಲೀಸರಿಗೆ ಪತಿ ಮೇಲೆ ಅನುಮಾನ ವ್ಯಕ್ತವಾಗಿತ್ತು.

ಭಾನುವಾರ ಠಾಣೆಗೆ ಕರೆಸಿ ವಿಚಾರಣೆಗೆ ಒಳಪಡಿಸಿದಾಗ ತಾನೇ ಪತ್ನಿಯಿಂದ ಕರೆದುಕೊಂಡು ಹೋಗಿ ಕುಂದೂರು ಬೆಟ್ಟದ ಬಳಿ ಕೊಲೆ ಮಾಡಿ ಚೊಟ್ಟನಹಳ್ಳಿ ನಾಲೆಗೆ ಶವವನ್ನು ಎಸೆದಿರುವುದಾಗಿ ಮಾಹಿತಿ ನೀಡಿದ್ದ. ಪೊಲೀಸರಿಗೆ ಕುಂದೂರು ಬಳಿಯ ನಾಲೆಯಲ್ಲಿ ಶವ ಪತ್ತೆಯಾಗಿದೆ.

ಪತಿಯೂ ಆತ್ಮಹತ್ಯೆಗೆ ಯತ್ನ:

ಆರೋಪಿ ಪತಿ, ಪತ್ನಿ ನನ್ನಿಂದ ಬೇರೆಯಾಗಿದ್ದ ಹಿನ್ನೆಲೆಯಲ್ಲಿ ಕೋಪಗೊಂಡು ಮಾತನಾಡುವ ನೆಪದಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ ಬಂದು ಮನೆಯಲ್ಲಿ ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.

ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ಆರೋಪಿಯು ಪೊಲೀಸರ ತನಿಖೆ ವೇಳೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಎಂ.ವಿಜಯಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿವೈಎಸ್ಪಿ ಎಚ್.ಲಕ್ಷ್ಮಿನಾರಾಯಣ ಪ್ರಸಾದ್, ಸಿಪಿಐ ಡಿ.ಪಿ.ಧನರಾಜ್, ಪಿಎಸ್ಐ ಕೆ.ಎಂ.ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!