ಮಳವಳ್ಳಿ ಬಾಲಕಿ ಹತ್ಯೆ : ಕುಟುಂಬಕ್ಕೆ 10 ಲಕ್ಷ ರು ಪರಿಹಾರದ ಚೆಕ್ ವಿತರಿಸಿದ ಸಚಿವ , ಸಂಸದೆ

Team Newsnap
1 Min Read
Malavalli girl's murder: Minister, MP distributed 10 lakh check to family ಮಳವಳ್ಳಿ ಬಾಲಕಿ ಹತ್ಯೆ : ಕುಟುಂಬಕ್ಕೆ 10 ಲಕ್ಷ ರು ಪರಿಹಾರದ ಚೆಕ್ ವಿತರಿಸಿದ ಸಚಿವ , ಸಂಸದೆ

ಮಳವಳ್ಳಿಯಲ್ಲಿ 10 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರ ಮೃತ ಬಾಲಕಿ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರು ಚೆಕ್​​​ ಬಿಡುಗಡೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಖಾತೆಗೆ ಸಿಎಂ ಪರಿಹಾರ ನಿಧಿಯನ್ನು ವರ್ಗಾಯಿಸಲಾಗಿದೆ.ಸಿದ್ದು ಸೋಲಿಸಲು ವರುಣಾದಲ್ಲಿ ಬಿಜೆಪಿಯಿಂದ ವಿಜಯೇಂದ್ರನನ್ನು ಕಣಕ್ಕಿಳಿಸುವ ರಣ ತಂತ್ರ

ಸಚಿವ ಕೆ.ಗೋಪಾಲಯ್ಯ, ಸಂಸದೆ ಸುಮಲತಾ ಬುಧವಾರ ಮೃತ ಬಾಲಕಿ ನಿವಾಸಕ್ಕೆ ಭೇಟಿ ನೀಡಿದ್ದರು. ಕುಟುಂಬಕ್ಕೆ ಸಾಂತ್ವನ ಹೇಳಿದ ಕೆ.ಗೋಪಾಲಯ್ಯ, ಸಂಸದೆ ಸುಮಲತಾ ಅವರು, ಸಿಎಂ ಪರಿಹಾರದಿಂದ ನೀಡಲಾಗಿದ್ದ 10 ಲಕ್ಷ ರೂಪಾಯಿ ಚೆಕ್ಅನ್ನು ಹಸ್ತಾಂತರ ಮಾಡಿದರು.

ಕುಂಭಮೇಳದಲ್ಲಿ ಮೃತ ಬಾಲಕಿ ಕುಟುಂಬಕ್ಕೆ ಸಿಎಂ 10 ಲಕ್ಷ ಪರಿಹಾರ ಘೋಷಿಸಿದ್ದರು.ಈ ವೇಳೆ ಶಾಸಕ ಅನ್ನದಾನಿ, ಜಿಲ್ಲಾಧಿಕಾರಿ ಅಶ್ವಥಿ ಸೇರಿದಂತೆ ಕೂಡ ಸ್ಥಳದಲ್ಲಿ ಹಾಜರಿದ್ದರು.


ಶಿಕ್ಷಣ ಇಲಾಖೆ ಹೈ ಅಲರ್ಟ್​:

ಟ್ಯೂಷನ್ ಹೋಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಂತರ ಇದೀಗ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಫುಲ್ ಅಲರ್ಟ್ ಆಗಿದೆ. ಅತ್ಯಾಚಾರ ಘಟನೆಯಿಂದ ಪೋಷಕರ ವಲಯದಲ್ಲಿ ಸದ್ಯ ಆತಂಕ‌ ಮನೆ ಮಾಡಿದೆ. ಹೀಗಾಗಿ ಶಿಕ್ಷಣ ಇಲಾಖೆ ಅಲರ್ಟ್ ಆಗಿದ್ದು, ಅನುಮತಿ ಪಡೆಯದೆ ಟ್ಯೂಷನ್ ಸೆಂಟರ್‌ಗಳನ್ನು ನಡೆಸಿದ್ರೆ ಎಫ್‌ಐಆರ್ ದಾಖಲು ಮಾಡಲಾಗುತ್ತದೆ. ಅಲ್ಲದೇ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಿಕ್ಷಕರು ಟ್ಯೂಷನ್ ಮಾಡಿದರೆ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿಯೂ ಸಹ ಆದೇಶ ಹೊರಡಿಸಲಾಗಿದೆ.

Share This Article
Leave a comment