ಸಿದ್ದು ಸೋಲಿಸಲು ವರುಣಾದಲ್ಲಿ ಬಿಜೆಪಿಯಿಂದ ವಿಜಯೇಂದ್ರನನ್ನು ಕಣಕ್ಕಿಳಿಸುವ ರಣ ತಂತ್ರ

Team Newsnap
1 Min Read

ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ದಿಂದ ಸ್ಪರ್ಧೆ ಮಾಡಿದರೆ ಮತ್ತೆ ಶತಾಯಗತಾಯ ಸೋಲಿಸಲೇಬೆಕೆಂದು ಬಿಜೆಪಿ ರಣತಂತ್ರ ರೂಪಿಸಿ ಶಿಕಾರಿಪುರದ ಜೊತೆ ವರುಣಾದಲ್ಲೂ ವಿಜಯೇಂದ್ರ ಸ್ಪರ್ಧೆಯ ಕಣಕ್ಕೆ ಇಳಿಸಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್‌ ಮಾಡಿದೆ.

ಬಾದಾಮಿಯಲ್ಲೇ ಮತ್ತೆ ಸಿದ್ದು ಸ್ಪರ್ಧೆ ಮಾಡಿದರೆ ಶ್ರೀರಾಮುಲುಯಿಂದಲೇ ಟಕ್ಕರ್ ಕೊಡುಲು ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ಬಿಜೆಪಿ ಸ್ಟಾರ್ ಅಭ್ಯರ್ಥಿಗಳನ್ನು ಹಾಕಬೇಕು ಎಂದು ಲೆಕ್ಕಾಚಾರ ಮಾಡಿದೆ.

ಶಿವಮೊಗ್ಗದ ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಫಿಕ್ಸ್ ಮಾಡಿ, 2ನೇ ಅಖಾಡ ವರುಣಾ ಎಂಬುದನ್ನು ಬಿಂಬಿಸಿ ಕಣಕ್ಕಿಳಿಸುವುದು, ಬಾದಾಮಿಯಲ್ಲೇ ಸಿದ್ದು ಸ್ಪರ್ಧೆಯಾದ್ರೆ 2018ರಂತೆ ಶ್ರೀರಾಮುಲುರನ್ನು ಅಥವಾ ಬಳ್ಳಾರಿ ಜಿಲ್ಲೆಯ ಸಂಡೂರು ಅಥವಾ ಕಂಪ್ಲಿ ಕ್ಷೇತ್ರಗಳಲ್ಲಿ ಒಂದನ್ನ ಫಿಕ್ಸ್ ಮಾಡಿ ಮೊದಲ ಆಯ್ಕೆಯಾಗಿ ಬಿಂಬಿಸಿ ಕಣಕ್ಕಿಳಿಸುವುದು ತಂತ್ರ ರೂಪಿಸಿದೆ. ಬಿಸಿಸಿಐನ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕ

ಹೈಕಮಾಂಡ್‌ನ ನಾಯಕರೊಬ್ಬರಿಂದ ಸಿದ್ದರಾಮಯ್ಯರನ್ನು ಕಟ್ಟಿಹಾಕುವ ಗೇಮ್ ಪ್ಲ್ಯಾನ್‌ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಸಿದ್ದರಾಮಯ್ಯಗೆ ಟಫ್ ಸ್ಪರ್ಧೆ ಕೊಡುವ ಅಭ್ಯರ್ಥಿ ಹಾಕಿದರೆ ಬೇರೆ ಕ್ಷೇತ್ರಗಳಲ್ಲಿ ಲಾಭದ ಲೆಕ್ಕಚಾರ ಮಾಡಿದೆ. ಪ್ರಚಾರದ ಕಡೇ ದಿನಗಳಲ್ಲಿ ಸಿದ್ದು ಸ್ಪರ್ಧೆ ಕ್ಷೇತ್ರದಲ್ಲೇ ಹೆಚ್ಚು ಪ್ರಚಾರ ಮಾಡುವಂತಾದ್ರೆ ಬೇರೆ ಕಡೆ ಲಾಭ ಎಂಬ ತಂತ್ರ ಬಿಜೆಪಿಯದ್ದಾಗಿದೆ.

Share This Article
Leave a comment