ಬಿಸಿಸಿಐನ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕ

Team Newsnap
1 Min Read
Kannadiga Roger Binny appointed as BCCI's 36th president ಬಿಸಿಸಿಐನ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕ

ಭಾರತೀಯ ಕ್ರಿಕೆಟ್ ತಂಡದ ( Indian Cricket Team )ಮಾಜಿ ಆಟಗಾರ ಹಾಗೂ 1983 ರ ವಿಶ್ವಕಪ್ ( WorldCup) ವಿಜೇತ ತಂಡದ ಹೀರೊ ರೋಜರ್ ಬಿನ್ನಿ ( Roger Binny ) (67) ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ( BCCI ) 36 ನೇ ಅಧ್ಯಕ್ಷರಾಗಿ ( President ) ನೇಮಕಗೊಂಡಿದ್ದಾರೆ.

ಮುಂಬೈನಲ್ಲಿ ನಡೆದ ಬಿಸಿಸಿಐ ( BCCI ) ಎಜಿಎಂನಲ್ಲಿ ಬಿನ್ನಿ ( Binny ) ಅವರ ನೇಮಕವನ್ನು ಪ್ರಕಟಿಸಲಾಯಿತು. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ( Sourav Ganguli ) ಉತ್ತರಾಧಿಕಾರಿಯಾಗಿ ಬಿನ್ನಿ ಆಯ್ಕೆಯಾಗಿದ್ದಾರೆ.ಬಿಸಿಸಿಐ ( BCCI ) ಅಧ್ಯಕ್ಷ ಸ್ಥಾನಕ್ಕೆ ಬಿನ್ನಿ ಮಾತ್ರ ನಾಮಪತ್ರ ಸಲ್ಲಿಸಿದ್ದರು.ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ: 6 ಮಂದಿ ಯಾತ್ರರ್ಥಿಗಳ ದುರಂತ ಸಾವು

ಬಿನ್ನಿ ಸದ್ಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ( Karnataka Cricket Association ) ಅಧ್ಯಕ್ಷರಾಗಿದ್ದಾರೆ. ಈಗ ರಾಜ್ಯ ಸಂಸ್ಥೆಯಲ್ಲಿ ತಮ್ಮ ಸ್ಥಾನವನ್ನು ತೊರೆಯಲಿದ್ದಾರೆ. ಮಧ್ಯಮ ವೇಗಿ 1983 ರಲ್ಲಿ ಭಾರತದ ಐತಿಹಾಸಿಕ ವಿಶ್ವಕಪ್ ವಿಜಯದ ರೂವಾರಿಗಳಲ್ಲಿ ಒಬ್ಬರಾಗಿದ್ದರು. ವಿಶ್ವಕಪ್ ನ ಎಂಟು ಪಂದ್ಯಗಳಲ್ಲಿ ಅವರು 18 ವಿಕೆಟ್‌ಗಳನ್ನು ಪಡೆದಿದ್ದರು. ಇದು ಪ್ರತಿಷ್ಠಿತ ಪಂದ್ಯಾವಳಿಯ 1983ರ ಆವೃತ್ತಿಯಲ್ಲಿ ಬೌಲರ್ ನ ಅತ್ಯುತ್ತಮ ಸಾಧನೆಯಾಗಿತ್ತು.

Share This Article
Leave a comment