ಕೆಆರ್ ಪೇಟೆಯಲ್ಲಿ ಅ.13ರಿಂದ ಮಹಾಕುಂಭಮೇಳ: ಲೋಗೋ ಬಿಡುಗಡೆ ಮಾಡಿದ ಬೊಮ್ಮಾಯಿ

Team Newsnap
1 Min Read
Maha Kumbh Mela from 13 Oct in KR Pete: Bommai released the logo ಕೆಆರ್ ಪೇಟೆಯಲ್ಲಿ ಅ.13ರಿಂದ ಮಹಾಕುಂಭಮೇಳ: ಲೋಗೋ ಬಿಡುಗಡೆ ಮಾಡಿದ ಬೊಮ್ಮಾಯಿ

ಕೆ.ಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ದಕ್ಷಿಣ ಭಾರತದ ಮಹಾಕುಂಭಮೇಳದ ಲೋಗೋ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಬಿಡುಗಡೆಗೊಳಿಸಿದರು.

ಮುಖ್ಯಮಂತ್ರಿಗಳ ರೇಸ್ ಕೋರ್ಸ್ ನಿವಾಸದಲ್ಲಿ ಮಹಾಕುಂಭಮೇಳದ ಲೋಗೋವನ್ನು ಬಿಡುಗಡೆ ಮಾಡುವ ಮೂಲಕ ಬಸವರಾಜ ಬೊಮ್ಮಾಯಿಯವರು ಶುಭ ಕೋರಿದರು.ಇದನ್ನು ಓದಿ –ಸರಳ ವಾಸ್ತು ಗುರೂಜಿ ಹತ್ಯೆಗೆ ಅಣ್ಣನ ಮಕ್ಕಳ ಎಂಟ್ರಿಯೂ ಕಾರಣ : ವಾಟ್ಸಾಪ್ ಸಂದೇಶದಿಂದ ಬಹಿರಂಗ

ಅ 13ರಿಂದ 16 ರವರೆಗೆ ಕೆ.ಆರ್ ಪೇಟೆಯ ಅಂಬಿಗರಹಳ್ಳಿ, ಸಂಗಾಪುರ ಹಾಗೂ ಪುರದ ಕಾವೇರಿ-ಹೇಮಾವತಿ-ಲಕ್ಷ್ಮಣ ತೀರ್ಥಗಳ ಸಮಾಗಮವಾಗುವ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಬಾಮೇಳ ನಡೆಯಲಿದೆ. ಪ್ರತಿದಿನ ಗಂಗಾರತಿ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಕುರಿತು ಗಮನಸೆಳೆಯಲೆಂದು ಮಹಾಕುಂಭಮೇಳದ ವಿಶೇಷ ಲೋಗೋ ಅನ್ನು ಸಿದ್ದಪಡಿಸಲಾಗಿದೆ

ಮಹಾಕುಂಭಮೇಳದ ಸಿದ್ಧತೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ನಡೆಯಲಿರುವ ಕಾರ್ಯಕ್ರಮ, ಎಷ್ಟು ದಿನ ನಡೆಯಲಿದೆ, ಜನ ಆಗಮಿಸುವ ಬಗ್ಗೆ ವಿಚಾರಿಸಿದರು.

ಅಗತ್ಯ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ

ಮಹಾಕುಂಭಮೇಳವು ಇದೊಂದು ರಾಜ್ಯದ ಮಹತ್ವದ ಕಾರ್ಯಕ್ರಮವಾಗಿದೆ. ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆ ಹಾಗೂ ವಿಶೇಷ ಕಾಳಜಿವಹಿಸಲಾಗುವುದು. ಯಾವುದೇ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್, ಶಾಸಕ ನಾಗೇಂದ್ರ, ಮಂಡ್ಯ ಜಿಲ್ಲಾಧಿಕಾರಿ ಎಸ್ ಅಶ್ವಥಿ, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಮತ್ತಿತರರು ಪಾಲ್ಗೊಂಡಿದ್ದರು.

Share This Article
Leave a comment