October 6, 2024

Newsnap Kannada

The World at your finger tips!

WhatsApp Image 2023 07 30 at 4.43.12 PM

ಹೆಚ್ಚಳವಾದ ʻಮದ್ರಾಸ್ ಐʼ ಪ್ರಕರಣ – ಮುಂಜಾಗೃತೆ – ಪರಿಹಾರ ಏನು ?

Spread the love

ಕಂಜಕ್ಟಿವೈಟಿಸ್ (Conjunctivitis) ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ `ಕಣ್ಣು’ ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿ ವಾತಾವರಣದಲ್ಲಿ ಹುಟ್ಟಿಕೊಳ್ಳುವ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟುಮಾಡುತ್ತದೆ.

ಈ ಬಾರಿ ರಾಜ್ಯದಲ್ಲಿ ಮಳೆಗಾಲಕ್ಕೂ ಮುನ್ನವೇ ʻಮದ್ರಾಸ್‌ ಐʼ ಪ್ರಕರಣ ಕಾಲಿಟ್ಟಿತ್ತು. ಈ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.

ಮದ್ರಾಸ್‌ ಐ ಲಕ್ಷಣಗಳು:

  • ಕಣ್ಣು ಕೆಂಪಾಗುವುದು, ನೀರು ಸೋರುವಿಕೆ
  • ಅತಿಯಾದ ಕಣ್ಣೀರು
  • ಕಣ್ಣಿನಲ್ಲಿ ತುರಿಕೆ
  • ಸತತ ಕಣ್ಣು ನೋವು ಮತ್ತು ಚುಚ್ಚುವಿಕೆ
  • ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು
  • ದೃಷ್ಟಿ ಮಂಜಾಗುವುದು
  • ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತದಿಂದ ಕೂಡಿರುವುದು

ಮುಂಜಾಗ್ರತಾ ಕ್ರಮ ಏನು ?

  • ವೈಯಕ್ತಿಕವಾಗಿ ಸ್ವಚ್ಛತೆಗೆ ಆದ್ಯತೆ ಕೊಡಿ
  • ಆರೋಗ್ಯವಂತ ವ್ಯಕ್ತಿಯು ಸೊಂಕು ಇರುವ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕದಿಂದ ದೂರ ಇರುವುದು
  • ಸೋಂಕಿತ ವ್ಯಕ್ತಿ ಬಳಸಿದ ಕರವಸ್ತ್ರ ಮತ್ತು ಇತರ ವಸ್ತುಗಳನ್ನ‌ ಬಳಸಬಾರದು
  • ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನ ತೊಳೆಯಬೇಕು
  • ಸೋಂಕಿತ ವ್ಯಕ್ತಿಗಳಿಗೆ ಶೀತ, ಜ್ವರ, ಕೆಮ್ಮು ಇದ್ದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು
  • ತೀವ್ರ ಸೋಂಕು ಉಂಟಾದರೆ ತಕ್ಷಣವೇ ನೇತ್ರ ತಜ್ಞರನ್ನ ಭೇಟಿ ಮಾಡಬೇಕು

ಏನು ಮಾಡಬೇಕು ?

KRS ನಲ್ಲಿ 112 ಅಡಿ ಗಡಿದಾಟಿದ ನೀರು :10 ಸಾವಿರ ಕ್ಯುಸೆಕ್ ಒಳಹರಿವು – ಕಬಿನಿ ಭರ್ತಿಗೆ 1 ಅಡಿ ಬಾಕಿ

  • ಸ್ಪಚ್ಫವಾದ ನೀರಿನಿಂದ ಕಣ್ಣುಗಳನ್ನ ಶುಚಿಗೊಳಿಸಿ
  • ಸೋಂಕು ಕಂಡು ಬಂದ ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಪಡೆಯಿರಿ
  • ಸೋಂಕಿತ ವ್ಯಕ್ತಿಗಳಿಗೆ ಪೌಷ್ಟಿಕ ಆಹಾರ ಕೊಡಬೇಕು
  • ಸೋಂಕಿತ ವ್ಯಕ್ತಿಗಳು ಬಳಸಿದ ಕರವಸ್ತ್ರ, ಇತರ ವಸ್ತುಗಳನ್ನ ಸಂಸ್ಕರಿಸಿ ಬಳಸಿರಿ
WhatsApp Image 2023 07 21 at 9.21.34 PM

Copyright © All rights reserved Newsnap | Newsever by AF themes.
error: Content is protected !!