ಮಧು ಜಿ ಮಾದೇಗೌಡರಿಗೆ ಜಯ:ಮೈಸೂರು ವಿಭಾಗದಲ್ಲೇ ಕಾಂಗ್ರೆಸ್ ನಲ್ಲಿ ಹೊಸ ಹುರುಪು- ಹೊಸ ಭರವಸೆ

Team Newsnap
1 Min Read
Run-up-the-river project at Shivanasamudra ಶಿವನಸಮುದ್ರದಲ್ಲಿ ರನ್-ಆಪ್-ದಿ-ರಿವರ್ ಯೋಜನೆ #RunUpTheRiver #Shivanasamudra #Project #news

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಅಭೂತ ಪೂರ್ವ ಗೆಲುವು ಸಾಧಿಸಿದ್ದಾರೆ . ಕಾಂಗ್ರೆಸ್ ಇದೇ ಮೊದಲ ಬಾರಿಗೆ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಇದುವರೆಗೆ ಕಾಂಗ್ರೆಸ್ ಗೆಲುವು ಸಾಧಿಸಿರಲಿಲ್ಲ.

ಆದರೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರು ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರನ್ನು 12,205 ಮತಗಳ ಅಂತರದಿಂದ ಪರಭಾವಗೊಳಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದನ್ನು ಓದಿ -ಡಿಸಿ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣದ ಮುಖ್ಯಪೇದೆ 

ಚುನಾವಣಾ ಕಣದಲ್ಲಿ 19 ಅಭ್ಯರ್ಥಿಗಳು ಇದ್ದರು. ಆದರೆ ಯಾವುದೇ ಅಭ್ಯರ್ಥಿಗಳು ಗೆಲುವಿಗೆ ನಿಗದಿ ಪಡಿಸಿದ 46,083 ಮತಗಳ ಕೋಟಾ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ಅಭ್ಯರ್ಥಿಗಳು ಪಡೆದ ಮತಗಳ ಆಧಾರದ ಮೇಲೆ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಎಲಿಮಿನೇಟ್ ಮಾಡಲಾಯಿತು. ಒಟ್ಟು 17 ಅಭ್ಯರ್ಥಿಗಳನ್ನು ಎಲಿಮಿನೆಟ್ ಮಾಡಿದರೂ ಅತಿಹೆಚ್ಚು ಮತ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರಿಗೆ ಗೆಲುವಿನ ಕೋಟಾ ತಲುಪಲು 808 ಮತಗಳ ಕೊರತೆ ಎದುರಾಯಿತು. ಇದನ್ನು ಓದಿ – ದಕ್ಷಿಣ ಪದವೀಧರ ಕ್ಷೇತ್ರ : ಮಧುಗೆ 5905 ಮತಗಳ ಮುನ್ನಡೆ – 11ಗಂಟೆ ವೇಳೆಗೆ ಫಲಿತಾಂಶ ನಿರೀಕ್ಷೆ

ನಂತರ ರವಿಶಂಕರ್ ಅವರನ್ನು ಎಲಿಮಿನೇಟ್ ಮಾಡಿ ಅಲ್ಲಿಂದ 808 ಮತಗಳನ್ನು ಪಡೆಯಲಾಯಿತು.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಅಂತಿಮ ಫಲಿತಾಂಶ 12,205 ಮತಗಳ ಅಂತರದಲ್ಲಿ ಕಾಂಗ್ರೆಸ್‌ಗೆ ಜಯ,

  • ಕಾಂಗ್ರೆಸ್- 46083
  • ಬಿಜೆಪಿ- 33878
  • ಜೆಡಿಎಸ್- 19630
Share This Article
Leave a comment