July 7, 2022

Newsnap Kannada

The World at your finger tips!

politics

ವಿಧಾನಪರಿಷತ್ ಸದಸ್ಯರಾಗಿ 7 ಸದಸ್ಯರು ಪ್ರಮಾಣವಚನ ಸ್ವೀಕಾರ

Spread the love

ಅವಿರೋಧವಾಗಿ ಆಯ್ಕೆಯಾದ ಕರ್ನಾಟಕ ವಿಧಾನ ಪರಿಷತ್ ನ 7 ಮಂದಿ ಸದಸ್ಯರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು

ಬಿಜೆಪಿಯಿಂದ ನಾಲ್ವರು, ಕಾಂಗ್ರೆಸ್ ನಿಂದ ಇಬ್ಬರು ಹಾಗೂ ಜೆಡಿಎಸ್ ನಿಂದ ಒಬ್ಬರು ಆಯ್ಕೆಯಾಗಿದ್ದರು ಇಂದು ಏಳು ಸದಸ್ಯರು ವಿಧಾನಸೌಧದಲ್ಲಿ ನಡೆದಂತ ಸರಳ ಸಮಾರಂಭದಲ್ಲಿ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದನ್ನು ಓದಿ – ಮಧು ಜಿ ಮಾದೇಗೌಡರಿಗೆ ಜಯ:ಮೈಸೂರು ವಿಭಾಗದಲ್ಲೇ ಕಾಂಗ್ರೆಸ್ ನಲ್ಲಿ ಹೊಸ ಹುರುಪು- ಹೊಸ ಭರವಸೆ

ಈ ಚುನಾವಣೆಯಲ್ಲಿ ಬಿಜೆಪಿಯಿಂದ ಲಕ್ಷ್ಮಣ್ ಸವದಿ, ಛಲವಾದಿ ನಾರಾಯಣಸ್ವಾಮಿ, ಹೇಮಲತಾ ಮತ್ತು ಕೇಶವ ಪ್ರಸಾದ್, ಕಾಂಗ್ರೆಸ್ ನಿಂದ ಅಬ್ದುಲ್ ಜಬ್ಬಾರ್, ನಾಗರಾಜ್ ಯಾದವ್ ಆಯ್ಕೆಯಾಗಿದ್ರೇ, ಜೆಡಿಎಸ್ ಪಕ್ಷದಿಂದ ಟಿ.ಎ ಶರವಣ ಆಯ್ಕೆಯಾಗಿದ್ದಾರೆ. ಇದನ್ನು ಓದಿ – ಡಿಸಿ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಮುಖ್ಯಪೇದೆ

ಅಲ್ಲಾ ಹೆಸರಿನಲ್ಲಿ ಅಬ್ದುಲ್ ಜಬ್ಬರ್ ಪ್ರಮಾಣ ವಚನ ಸ್ವೀಕರಿಸಿದರೆ ಭಗವಂತನ ಹೆಸರಿನಲ್ಲಿ ಲಕ್ಷ್ಮಣ್ ಸವದಿ, ನಾಗರಾಜ್ ಯಾದವ್, ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಛಲವಾಜಿ ನಾರಾಯಣಸ್ವಾಮಿ, ಶಿರಡಿ ಸಾಯಿಬಾಬ ಹಾಗೂ ತಿರುಪತಿ ವೆಂಕಟೇಶ್ವರನ ಹೆಸರಿನಲ್ಲಿ ಟಿ.ಎ ಶರವಣ, ವಾಲ್ಮೀಕಿ ಹೆಸರಿನಲ್ಲಿ ಹೇಮಲತಾ ನಾಯಕ್ ಪ್ರಮಾಣ ವಚನ ಸ್ವೀಕರಿಸಿದು.

ವಿಧಾನಪರಿಷತ್ ವಿಧಾನಪರಿಷತ್

error: Content is protected !!