December 25, 2024

Newsnap Kannada

The World at your finger tips!

nagamangal kench

ಪೊಲೀಸ್ ಅಧಿಕಾರಿ ಸೋಗು ಹಾಕಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್

Spread the love

ಪೊಲೀಸ್​ ಅಧಿಕಾರಿ ಎಂದು ಹೇಳಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ನಾಗಮಂಗಲದ ಆರೋಪಿಯೊಬ್ಬನ್ನನ್ನು ಅಮೃತೂರು ಪೋಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಮಮಂಗಲ ತಾಲೂಕು ದೊಡ್ಡನಾಗನಹಳ್ಳಿ ಗ್ರಾಮದ ನಿವಾಸಿ ಪ್ರದೀಪ @ ಕೆಂಚ (37) ಬಂಧಿತ ಆರೋಪಿ.

ಕಳೆದ ಆಗಸ್ಟ್ 1 ರಂದು ಪೊಲೀಸರ ಸೋಗಿನಲ್ಲಿ ಬಂದಿದ್ದ ಆರೋಪಿ ಮಹಿಳೆಯೋರ್ವರನ್ನು ಸಾಹೇಬ್ರು ನಿನ್ನ ಕರಿತಿದ್ದಾರೆ ಬಾ ಅಂತಾ ಹೇಳಿ ಕುಣಿಗಲ್ ತಾಲೂಕಿನ ಶ್ರೀನಿವಾಸ ದೇವರ ಬೆಟ್ಟಕ್ಕೆ ಕರೆದೊಯ್ದು..

ಈ ವೇಳೆ ಮಹಿಳೆಗೆ ಚಾಕು ತೋರಿಸಿ ಅತ್ಯಾಚಾರ ಎಸಗಿ, 40 ಗ್ರಾಂ ಚಿನ್ನದ ಸರ, ಮೊಬೈಲ್, ಎಟಿಎಮ್ ಕಾರ್ಡ್ ದೋಚಿ ಪರಾರಿಯಾಗಿದ್ದ ಎನ್ನಲಾಗಿದೆ

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಮೃತೂರು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಪ್ರಕರಣ ನಡೆದು ಒಂದು ತಿಂಗಳ ನಂತರ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!