ನಿರ್ದೇಶಕ ಎಸ್​. ನಾರಾಯಣ್​ ಫೇಸ್​ಬುಕ್​ ಖಾತೆ ಹ್ಯಾಕ್​; ಹಣಕ್ಕೆ ಬೇಡಿಕೆ ಇಟ್ಟ ಕಿಡಿಗೇಡಿಗಳು

Team Newsnap
1 Min Read

ಕನ್ನಡದ ನಿರ್ಮಾಪಕ, ನಿರ್ದೇಶಕ ಕಲಾಸಾಮ್ರಾಟ್​​ ಎಸ್​. ನಾರಾಯಣ್​ ಅಧಿಕೃತ ಫೇಸ್​ಬುಕ್​ ಖಾತೆಯನ್ನು ಹ್ಯಾಕ್​ ಮಾಡಿದ ಕಿಡಿಗೇಡಿಗಳು, ಸ್ನೇಹಿತರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ.

ಖಾತೆ ಹ್ಯಾಕ್​ ಆಗಿರುವ ಬಗ್ಗೆ ಎಸ್​. ನಾರಾಯಣ್​ ಫೇಸ್​ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದ‌ ಮೂಲಕ ಸ್ಪಷ್ಟನೆ ನೀಡಿದ್ದಾರೆ

ನನ್ನ ಹೊಸ ಚಿತ್ರ 5ಡಿ ಟ್ರೈಲರ್​ ರಿಲೀಸ್​ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ಯಾರು ನನ್ನ ಹೆಸರು ಹೇಳಿಕೊಂಡು ಹಣ ಕೇಳಿದರೆ ಹಾಕಬೇಡಿ ಎಂದಿದ್ದಾರೆ.

ಮೋಸ ಮಾಡೋದಕ್ಕಾಗಿಯೇ ನನ್ನ ಖಾತೆಯನ್ನು ಹ್ಯಾಕ್​​ ಮಾಡಿದ್ದಾರೆ. ಯಾರಾದರು ಅಪ್ಪಿ ತಪ್ಪಿ ಮೋಸ ಹೋದರೆ ನಾನು ಜವಾಬ್ದಾರನಾಗಿರುವುದಿಲ್ಲ. ಜೊತೆಗೆ ಈ ಕುರಿತು ಸೈಬರ್ ಕ್ರೈಂ​ಗೆ ದೂರು ನೀಡಲು ಮುಂದಾಗಿದ್ದಾರೆ.

Share This Article
Leave a comment