ಮಂಡ್ಯ: ಮದ್ದೂರು ZP AE ಮಹಾಲಿಂಗಯ್ಯ 35 ಸಾವಿರ ರು ಲಂಚ ಸ್ವೀಕಾರ – ACB ಬಲೆಗೆ

Team Newsnap
1 Min Read

ಗುತ್ತಿಗೆದಾರರೊಬ್ಬರಿಂದ ಸಹಾಯಕ ಇಂಜಿನಿಯರ್ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಮದ್ದೂರಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಸೋಮವಾರ ನಡೆದಿದೆ.

ಸಹಾಯಕ ಇಂಜಿನಿಯರ್ ಎಂ.ಮಹಾಲಿಂಗಯ್ಯ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ.

acb 1

ಮದ್ದೂರು ತಾಲೂಕಿನ ಈರೇಗೌಡನದೊಡ್ಡಿಯ ಗುತ್ತಿಗೆದಾರ ಕೃಷ್ಣಗೌಡರಿಂದ ೫ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಮುಗಿಸಿ ಬಿಲ್ ಪಾವತಿಸುವಂತೆ ಮೇಲಾಧಿಕಾರಿ ಶಿಫಾರಸು ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಸಹಾಯಕ ಇಂಜಿನಿಯರ್ ಮಹಾಲಿಂಗಯ್ಯ ಕಚೇರಿ ಕೆಲಸಕ್ಕೆ ೩೫ ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ.
ಇದರ ಬಗ್ಗೆ ಗುತ್ತಿಗೆದಾರ ಮೊದಲೇ ಎಸಿಬಿಗೆ ದೂರು ನೀಡಿದ್ದನು. ಇದನ್ನು ಓದಿ –ಕೆಆರ್‌ಎಸ್‌ನಿಂದ 75000 ಕ್ಯೂಸೆಕ್ ನೀರು ಬಿಡುಗಡೆ

ಸೋಮವಾರ ಕಚೇರಿಯಲ್ಲಿಯೇ ಸಹಾಯಕ ಇಂಜಿನಿಯರ್ ಮಹಾಲಿಂಗಯ್ಯಗೆ ೩೫ ಸಾವಿರ ರೂ. ಲಂಚ ನೀಡಿದ್ದಾರೆ. ಅದನ್ನು ತನ್ನ ಕಾರು ಚಾಲಕ ನವೀನ್ ಬಳಿ ನೀಡಿದ್ದಾರೆ. ಇದನ್ನೆಲ್ಲ ಮುಂಚಿತವಾಗಿಯೇ ಪ್ಲಾನ್ ಮಾಡಿದ್ದ ಎಸಿಬಿ ಎಸ್ಪಿ ಸಜಿತ್ ಮಾರ್ಗದರ್ಶನದಲ್ಲಿಅಧಿಕಾರಿಗಳು ದಾಳಿ ನಡೆಸಿ ಲಂಚದ ಸಮೇತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಧುಮ್ಮಿಕ್ಕುವ ಗಗನಚುಕ್ಕಿ ಜಲಪಾತ

ಮಂಡ್ಯದ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment