ಸಹಾಯಕ ಇಂಜಿನಿಯರ್ ಎಂ.ಮಹಾಲಿಂಗಯ್ಯ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ.
ಮದ್ದೂರು ತಾಲೂಕಿನ ಈರೇಗೌಡನದೊಡ್ಡಿಯ ಗುತ್ತಿಗೆದಾರ ಕೃಷ್ಣಗೌಡರಿಂದ ೫ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಮುಗಿಸಿ ಬಿಲ್ ಪಾವತಿಸುವಂತೆ ಮೇಲಾಧಿಕಾರಿ ಶಿಫಾರಸು ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಸಹಾಯಕ ಇಂಜಿನಿಯರ್ ಮಹಾಲಿಂಗಯ್ಯ ಕಚೇರಿ ಕೆಲಸಕ್ಕೆ ೩೫ ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ.
ಇದರ ಬಗ್ಗೆ ಗುತ್ತಿಗೆದಾರ ಮೊದಲೇ ಎಸಿಬಿಗೆ ದೂರು ನೀಡಿದ್ದನು. ಇದನ್ನು ಓದಿ –ಕೆಆರ್‌ಎಸ್‌ನಿಂದ 75000 ಕ್ಯೂಸೆಕ್ ನೀರು ಬಿಡುಗಡೆ
ಸೋಮವಾರ ಕಚೇರಿಯಲ್ಲಿಯೇ ಸಹಾಯಕ ಇಂಜಿನಿಯರ್ ಮಹಾಲಿಂಗಯ್ಯಗೆ ೩೫ ಸಾವಿರ ರೂ. ಲಂಚ ನೀಡಿದ್ದಾರೆ. ಅದನ್ನು ತನ್ನ ಕಾರು ಚಾಲಕ ನವೀನ್ ಬಳಿ ನೀಡಿದ್ದಾರೆ. ಇದನ್ನೆಲ್ಲ ಮುಂಚಿತವಾಗಿಯೇ ಪ್ಲಾನ್ ಮಾಡಿದ್ದ ಎಸಿಬಿ ಎಸ್ಪಿ ಸಜಿತ್ ಮಾರ್ಗದರ್ಶನದಲ್ಲಿಅಧಿಕಾರಿಗಳು ದಾಳಿ ನಡೆಸಿ ಲಂಚದ ಸಮೇತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಧುಮ್ಮಿಕ್ಕುವ ಗಗನಚುಕ್ಕಿ ಜಲಪಾತ
ಮಂಡ್ಯದ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ