ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೈವೇಯ ಮದ್ದೂರು ಬೈಪಾಸ್ ರಸ್ತೆ ಇಂದು ಅಥವಾ ನಾಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ.
ನವೆಂಬರ್ ಅಂತ್ಯದ ವೇಳೆ ಮದ್ದೂರು ಬೈಪಾಸ್ ಓಪನ್ ಆಗಲಿದೆ ಎಂದು ಈ ಹಿಂದೆ ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಆದರೆ ಐದಾರು ದಿನ ತಡವಾಗಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಜನರ ಕ್ಷಮೆ ಕೋರಿದ್ದಾರೆ.ಚಿತ್ರದುರ್ಗದ ಡಾ. ರೂಪಾ ಸಾವಿಗೆ ಟ್ವಿಸ್ಟ್: ತಲೆಗೆ ಗುಂಡೇಟು ಬಿದ್ದು ಸಾವು?
ಐದಾರು ದಿನ ಮಳೆಯಿಂದ ಬೈಪಾಸ್ ಕಾಮಗಾರಿ ತಡವಾಗಿದೆ. ಎಕ್ಸ್ ಪೆಂಕ್ಷನ್ ಜಾಯಿಂಟ್ ಕೆಲಸ ಮುಕ್ತಾಯವಾಗಿದೆ ಸೇಫ್ಟಿ ಆಡಿಟಿಂಗ್, ಲೋಡ್ ಟೆಸ್ಟಿಂಗ್, ಮಾರ್ಕಿಂಗ್ ಕೂಡ ಮುಗಿದಿದೆ. ಫ್ಲೈಓವರ್ ಸಂಚಾರಕ್ಕೆ ಮುಕ್ತವಾದರೆ ಮೈಸೂರು – ಬೆಂಗಳೂರು ಸಂಚರಿಸುವವರಿಗೆ ಕನಿಷ್ಠ 15-20 ನಿಮಿಷ ಉಳಿಯುತ್ತೆ ಎಂದು ಪ್ರತಾಪ್ ಸಿಂಹ ಫೇಸ್‍ಬುಕ್ ಲೈವ್ ನಲ್ಲಿ ಹೇಳಿದ್ದಾರೆ
ಕೆಲವೇ ದಿನಗಳಲ್ಲಿ ಶ್ರೀರಂಗಪಟ್ಟಣ ಬೈಪಾಸ್ ಕೂಡ ಓಪನ್ ಆಗಲಿದೆ ಹನಕರೆ, ಯಲಿಯೂರು, ಇಂಡವಾಳು ಸೇರಿದಂತೆ ಹಲವಡೆ ಅಂಡರ್ ಪಾಸ್ ಕಾಮಗಾರಿ ಆಗಬೇಕಿದೆ. ಮೈ-ಬೆಂ ದಶಪಥ ರಸ್ತೆ ಕಾಮಗಾರಿ ಪೂರ್ಣ ಆಗಲು ಇನ್ನು ಎರಡು ತಿಂಗಳು ಬೇಕಿದೆ ಎಂದು ಮದ್ದೂರು ಫ್ಲೈಓವರ್ ಮೇಲೆ ಸಂಚರಿಸಿ ಫೇಸ್‍ಬುಕ್ ಲೈವ್ ಮೂಲಕ ದಶಪಥ ಹೆದ್ದಾರಿ ಬಗ್ಗೆ ಪ್ರತಾಪ್ ಸಿಂಹ ಮಾಹಿತಿ ನೀಡಿದರು.
- ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
- ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
- ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ
- ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್
- ಪತ್ರಕರ್ತ ಹೊನಕೆರೆ ನಂಜಂಡೇಗೌಡರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರಕಟ
- ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ: ಜು. 7 ರಂದು ಬಜೆಟ್ ಮಂಡನೆ
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ