ಚಿತ್ರದುರ್ಗದ ಡಾ.ರೂಪಾ ಸಾವಿಗೆ ಟ್ವಿಸ್ಟ್‌: ತಲೆಗೆ ಗುಂಡೇಟು ಬಿದ್ದು ಸಾವು ?

Team Newsnap
1 Min Read

ಚಿತ್ರದುರ್ಗ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರೂಪಾ ಸೋಮವಾರ ಬೆಳಗ್ಗೆ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

ಡಾ ರೂಪ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ವೈದ್ಯಕೀಯ ಪರೀಕ್ಷಾ ವರದಿಯಂತೆ ತಲೆಗೆ ಗುಂಡು ಬಿದ್ದು ಸಂಭವಿಸಿದ ಸಾವು ಎಂದು ಹೇಳಲಾಗಿದೆ.

ಚಿತ್ರದುರ್ಗದ ವಿ.ಪಿ ಬಡಾವಣೆಯ‌ ಮನೆಯಲ್ಲಿ ನಡೆದ ಈ ಘಟನೆ ಬಗ್ಗೆ ಡಾ.ರೂಪಾ ಪತಿ ಡಾ. ರವೀಂದ್ರ ಪೊಲೀಸರಿಗೆ ನೀಡಿದ ಪ್ರಾಥಮಿಕ ಮಾಹಿತಿಯಲ್ಲಿ ಅವರು ಕಾಲು ಜಾರಿ ಬಿದ್ದು ತಲೆಗೆ ಗಾಯವಾಗಿ ಮೃತಪಟ್ಟಿರಬಹುದು ಎಂದು ಹೇಳಿದ್ದರು.

ಆದರೆ ಡಾ. ರೂಪಾ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದು ಪೋಸ್ಟ್‌ ಮಾರ್ಟಂ ವೇಳೆ ತಿಳಿದುಬಂದಿದೆ. ಇದರ ಜತೆಗೆ ಅವರು ಬರೆದಿಟ್ಟಿರುವ ಡೆತ್‌ ನೋಟ್‌ ಕೂಡಾ ಲಭ್ಯವಾಗಿದೆ . ನನ್ನ ಸಾವಿಗೆ ನಾನೇ ಕಾರಣ ಎಂದು ರೂಪ ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ. ಚಿತ್ರದುರ್ಗ ನಗರ ಠಾಣೆ ಪೊಲೀಸರಿಂದ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ವಿಧಿ ವಿಜ್ಞಾನ ಇಲಾಖೆಯ ವಿಶೇಷ ತಂಡವನ್ನು ಬೆಂಗಳೂರಿನಿಂದ ಕರೆಸಲಾಗಿದೆ ಅವರ ವರದಿ ಬಳಿಕ ಸಾವಿನ ನಿಜವಾದ ಕಾರಣ ಬಯಲಾಗಲಿದೆ. ಈ ಸಾವು ತನಗೂ ಶಾಕ್‌ ನೀಡಿದ್ದು, ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವುದಾಗಿ ಡಾ. ರೂಪಾ ಅವರ ಪತಿ ಡಾ. ರವಿ ಹೇಳಿದ್ದಾರೆ. ರೋಹಿಣಿ ಸಿಂಧೂರಿ ಪತಿ ಸುಧೀರ್ ಯಲಹಂಕದಲ್ಲಿ ಭೂ ಕಬಳಿಕೆ ? ಡಿಜಿಪಿಗೆ ಟ್ವೀಟ್ ಮೂಲಕ ದೂರು

ಡಾ. ರೂಪಾ ಮನೆಯಲ್ಲಿ ರಿವಾಲ್ವರ್‌ ಇಟ್ಟುಕೊಂಡಿದ್ದು, ಅವರು ತುಂಬಾ ಸಾಲ ಮಾಡಿದ್ದರು ಎಂಬ ಮಾಹಿತಿಯೂ ಇದೆ. ಅವರು 25 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆ‌ ಬೆಳೆದು ಕೋಟ್ಯಾಂತರ ರೂಪಾಯಿ ಸಾಲ‌ ಮಾಡಿ ಕೈ ಸುಟ್ಟುಕೊಂಡಿದ್ದರೆನ್ನಲಾಗಿದೆ. ಇತ್ತೀಚೆಗೆ ಒಂದು ಹೋಟೆಲ್‌ ಖರೀದಿ ನಷ್ಟ ಅನುಭವಿಸಿದ್ದರಂತೆ ಪತಿ-ಪತ್ನಿ ಸಾರ್ವಜನಿಕವಾಗಿ ಚೆನ್ನಾಗಿದ್ದರೂ ಈ ದುರಂತ ನಡೆದಿದೆ.

Share This Article
Leave a comment