December 21, 2024

Newsnap Kannada

The World at your finger tips!

lovers tumkur

ತುಮಕೂರಿನಲ್ಲಿ ಪ್ರಿಯತಮ ಅಪಘಾತದಲ್ಲಿ ಸಾವು, ವಿಷ ಸೇವಿಸಿ ಜೀವ ಬಿಟ್ಟ ಪ್ರಿಯತಮೆ

Spread the love

ಪ್ರೀತಿಸಿ ಮದುವೆಯಾಗಲು ಸಿದ್ಧತೆ ನಡೆಸಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಪ್ರಿಯತಮ ಅಪಘಾತದಲ್ಲಿ ಸಾವನ್ನಪ್ಪಿದ್ದ ಸುದ್ದಿ ತಿಳಿದು ಪ್ರಿಯತಮೆಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ತಾಲೂಕಿನ ಅರೆಹಳ್ಳಿಯಲ್ಲಿ ನಡೆದಿದೆ.

ಧನುಷ್ (23), ಸುಷ್ಮಾ (22) ಮೃತ ದುರ್ದೈವಿಗಳು. ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ ಹಾಗೂ ಅರೆಹಳ್ಳಿ ಗ್ರಾಮದ ಸುಷ್ಮಾ ಕಳೆದ ಎರಡು ವರ್ಷಗಳಿಂದ ಪ್ರೀತಿಸಿ ಮದುವೆಗೆ ಮನೆಯವರನ್ನೂ ಒಪ್ಪಿಸಿ ಸಪ್ತಪದಿ ತುಳಿಯುವ ಸಿದ್ಧತೆಯಲ್ಲಿದ್ದರು.

ಇದನ್ನು ಓದಿ :ಭೀಕರ ಕಾರು ಅಪಘಾತ : ಆಸೀಸ್ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ದುರಂತ ಸಾವು

ಈ ನಡುವೆ ಮೇ 11 ರಂದು ನಡೆದ ನೆಲಮಂಗಲ ಕುಲುವನಹಳ್ಳಿ ಬಳಿ ನಡೆದ ಅಪಘಾತದಲ್ಲಿ ಧನುಷ್ ಮೃತಪಟ್ಟನು .

ಸಾವಿನ ಸುದ್ದಿಕೇಳಿ ಆಘಾತಗೊಂಡಿದ್ದ ಯುವತಿ ಸುಷ್ಮಾ, ಪ್ರಿಯಕರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಳು. ಅಂದಿನಿಂದಲೂ ಧನುಷ್ ಸಾವಿನ ಯೋಚನೆಯಲ್ಲಿಯೇ ದುಃಖಿಸುತ್ತಿದ್ದ ಸುಷ್ಮಾ, ನಿನ್ನೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.

ಇದನ್ನು ಓದಿ : ಮೇ 22 ರಿಂದ ಸಿಎಂ ಬೊಮ್ಮಾಯಿ ದಾವೋಸ್ ಪ್ರವಾಸ: ಡಾ ಅಶ್ವತ್ಥ್ ನಾರಾಯಣ , ನಿರಾಣಿ ಸಾಥ್

ಈ ವೇಳೆ ಕುಟುಂಬಸ್ಥರು ಆಕೆ ಚಿಕಿತ್ಸೆ ನಾಲ್ಕೈದು ಆಸ್ಪತ್ರೆಗಳಲ್ಲಿ ಸುತ್ತಿ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 8 ಗಂಟೆ ಸುಮಾರಿನಲ್ಲಿ ಸಾವನ್ನಪ್ಪಿದ್ದಾಳೆ.

ಸುಷ್ಮಾ ಎಂಕಾಂ ವಿದ್ಯಾಭ್ಯಾಸ ಮಾಡುತ್ತಿದ್ದರೇ, ಧನುಷ್ ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟಿದ್ದ. ಪ್ರೀತಿ ವಿಚಾರ ಗೊತ್ತಾಗಿ ಮನೆಯವರು ಇಬ್ಬರಿಗೂ ಮದುವೆ ನಿಶ್ಚಯ ಮಾಡಿದ್ದರು. ಆದರೆ ಊರಿನ ಜಾತ್ರೆಗೆ ಬರುವ ವೇಳೆ ಅಪಘಾತ ನಡೆದು ಧನುಷ್ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಕುರಿತಂತೆ ಹೆಬ್ಬೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!