ಮಂಡ್ಯದ ಬಳಿ ರಸ್ತೆಯಲ್ಲಿ ಬೀಸಾಡಿ ಹೋಗಿದ್ದ ದ್ರಾಕ್ಷಿ ಬಾಚಲು ಜನವೋ ಜನ !

Team Newsnap
1 Min Read

ರಸ್ತೆಯಲ್ಲಿ ಅನುಮಾನಸ್ಪದವಾಗಿ ಬಿದ್ದಿದ್ದ ದ್ರಾಕ್ಷಿ ಗೊಂಚಲನ್ನು ಬಾಚಿಕೊಳ್ಳಲು ನಾ ಮುಂದು ತಾ ಮುಂದು ಎಂದು ಜನ ಮುಗಿ ಬಿದ್ದ ಘಟನೆ ಮಂಡ್ಯ ಸಮೀಪದ ರಸ್ತೆ ಬಳಿ ಜರುಗಿದೆ.

ಇದನ್ನು ಓದಿ : ಮೈಸೂರು ಶಾಸಕ ದೇವೇಗೌಡರ 3 ವರ್ಷದ ಮೊಮ್ಮಗಳು ಅನಾರೋಗ್ಯದಿಂದ ಸಾವು

ಮಂಡ್ಯದ ವಿಸಿ ಫಾರ್ಮ್ ಗೇಟ್ ಬಳಿ ಯಾರೋ ಇದಕ್ಕಿದ್ದ ಹಾಗೆ ಕ್ಯಾಂಟರ್‌ ವಾಹನದಲ್ಲಿ ಬಂದು ಸುಮಾರು 100ಕ್ಕೂ ಹೆಚ್ಚು ಕೆಜಿ ದ್ರಾಕ್ಷಿಯನ್ನು ಸುರಿದು ಹೋಗಿದ್ದಾರೆ. ದ್ರಾಕ್ಷಿ ಸುರಿಯುತ್ತಿದ್ದಂತೆ ಜನರು, ಆತ ಯಾಕೆ ಸುರಿಯುತ್ತಿದ್ದಾನೆ ಎಂದು ಕೇಳದೇ  ನಾ ಮುಂದು ತಾ ಮುಂದು ಎಂದು ಬಾಚಿಕೊಳ್ಳಲು ಮುಂದಾಗಿದ್ದಾರೆ.

ಸದ್ಯ ದ್ರಾಕ್ಷಿಯ ಬೆಲೆ ಕೆಜಿಗೆ 70-80 ರೂಪಾಯಿ ಇದ್ದರೂ ಸಹ ಆ ವ್ಯಕ್ತಿ ರಸ್ತೆಗೆ ದ್ರಾಕ್ಷಿಯನ್ನು ಏಕೆ ಸುರಿದು ಹೋದ ಎಂಬ ಅನುಮಾನಗಳು ಮೂಡುತ್ತಿವೆ.
ಹಳ್ಳಿಯ ಜನರಲ್ಲದೇ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ದ್ರಾಕ್ಷಿಯನ್ನು ತುಂಬಿಕೊಂಡರು.

ಇದನ್ನು ಓದಿ : ಭೀಕರ ಕಾರು ಅಪಘಾತ : ಆಸೀಸ್ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ದುರಂತ ಸಾವು

ಇಲ್ಲಿ ಸುಮ್ಮನೆ ಎಸೆದು ಹೋಗಿದ್ದಾರೆ, ಅವೆಲ್ಲವೂ ಹಾಳಾಗುತ್ತದೆ. ಅದಕ್ಕೆ ನಾವಾದರೂ ತಿನ್ನಬಹುದು ಎಂದು ತುಂಬಿಕೊಂಡು ಹೋಗುತ್ತಿದ್ದೇವೆ ಎಂದು ಜನ ಹೇಳಿದರು.

Share This Article
Leave a comment