ಮೈಸೂರಿನ ಹೋಟೆಲ್ ನಲ್ಲಿ ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಿಯಕರನನ್ನು ದೇವರಾಜ ಪೊಲೀಸರು ಬಂಧಿಸಿದ್ದಾರೆ.
ಅಪೂರ್ವ ಶೆಟ್ಟಿ (21) ಕೊಲೆಗೀಡಾದ ಯುವತಿ. ಪ್ರೀಯಕರ ಆಶಿಕ್ (28) ಬಂಧಿತ ಆರೋಪಿ.
ಕೊಲೆಯಾದ ಅಪೂರ್ವ ಶೆಟ್ಟಿಯನ್ನು ಆರೋಪಿ ಆಶಿಕ್ ಪ್ರೀತಿಸುತ್ತಿದ್ದ. ಮೃತ ಯುವತಿಯು ವಿಜಯನಗರದ ಪಿಜಿಯಲ್ಲಿದ್ದರು, ಈ ಇಬ್ಬರು ಮೂರು ದಿನಗಳ ಕಾಲ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು.
ಇದೇ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ಗಲಾಟೆಯಲ್ಲಿ ಆರೋಪಿ ಆಶಿಕ್, ಅಪೂರ್ವ ಶೆಟ್ಟಿಯ ಮೇಲೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದನು.
ಫೋಕ್ಸೋ ಪ್ರಕರಣದಲ್ಲಿ ವಾರ್ಡನ್ ರಶ್ಮಿ ಬಂಧನ
ಪ್ರೇಯಸಿಯನ್ನುಬ ಕೊಲೆ ಮಾಡಿದ ಬಳಿಕ ಹೋಟೆಲ್ ರೂಮ್ನಿಂದ ಎಸ್ಕೇಪ್ ಆಗಿದ್ದ, ಆರೋಪಿ ಆಶಿಕ್ ಪಿರಿಯಾಪಟ್ಟಣದ ಕಂಪ್ಲಾಪುರ ಬಳಿ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ಆದರೆ ಪೊಲೀಸರು ಮೊಬೈಲ್ ಟವರ್ ಲೋಕೆಶನ್ ಆಧರಿಸಿ ಆರೋಪಿ ಇದ್ದ ಸ್ಥಳವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ,
ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು