ಕರಾವಳಿ ಅಭಿವೃದ್ದಿಗೆ ಶಕ್ತಿ ನೀಡಲಿರುವ ಪ್ರಧಾನಿ ಮೋದಿ : ಸಿಎಂ ಬೊಮ್ಮಾಯಿ

Team Newsnap
1 Min Read

ಕರಾವಳಿ ಅಭಿವೃದ್ಧಿಗೆ ಅತ್ಯಂತ ದೊಡ್ಡ ಶಕ್ತಿಯನ್ನು ಪ್ರಧಾನ ಮಂತ್ರಿಗಳು ತುಂಬಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಪ್ರಧಾನಮಂತ್ರಿಗಳು ಬಹಳ ದಿನಗಳ ನಂತರ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಬರುವಾಗ ಹಲವಾರು ಯೋಜನೆಗಳಿಗೆ ಮಂಜೂರಾತಿ ನೀಡಿದ್ದಾರೆ. 3800 ಕೋಟಿ ರೂ.ಗಳ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.

ಕರಾವಳಿಯ ಅಭಿವೃದ್ಧಿಗಾಗಿ ಆರ್ಥಿಕ ಚಟುವಟಿಕೆ ಮತ್ತು ಬಂದರುಗಳ ಸಾಮರ್ಥ್ಯ ಹಾಗೂ ವ್ಯವಹಾರಗಳನ್ನು ಹೆಚ್ಚಿಸುವ ಹಾಗೂ ಉದ್ಯೋಗವನ್ನು ವೃದ್ಧಿಸುವ ಯೋಜನೆಗಳಾಗಿವೆ. ಕರ್ನಾಟಕಕ್ಕೆ 100 ಆಳ ಸಮುದ್ರ ಮೀನುಗಾರಿಕೆ ದೋಣಿಗಳನ್ನು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮಂಜೂರು ಮಾಡಿದ್ದಾರೆ. ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿಸ್ತರಣೆ ಮಾಡಿದ್ದಾರೆ. ರಾಜ್ಯ ಸರ್ಕಾರವೂ ಹಲವಾರು ಯೋಜನೆಗಳನ್ನು ಈ ಭಾಗಕ್ಕೆ ಜಾರಿ ಮಾಡಿದ್ದಾರೆ ಈ ಎಲ್ಲಾ ಯೋಜನೆಗಳಿಗೆ ಇಂದು ಚಾಲನೆ ದೊರೆಯಲಿದೆ ಎಂದರು.

ನವ ಮಂಗಳೂರು ಬಂದರು ಪ್ರಾಧಿಕಾರದ ವಿವಿಧ ಯೋಜನೆಗಳ ಲೋಕಾರ್ಪಣೆ,ಶಂಕುಸ್ಥಾಪನೆ ನೆರವೇರಿಸಲು ಮಂಗಳೂರಿಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಗತಿಸಿದರು.

Share This Article
Leave a comment