ಮಂಗಳೂರು- 3,700 ಕೋಟಿ ರು ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

Team Newsnap
1 Min Read
Another lapse in 'Pradhani' security, the young man who ran to 'Modi' 'ಪ್ರಧಾನಿ' ಭದ್ರತೆಯಲ್ಲಿ ಮತ್ತೆ ಲೋಪ, 'ಮೋದಿ' ಬಳಿ ಓಡಿ ಬಂದ ಯುವಕ

ಪ್ರಧಾನಿ ಮೋದಿ 3,700 ಕೋಟಿ ರುಗಳ ಯೋಜನೆಗಳಿಗೆ ಮಂಗಳೂರಿನಲ್ಲಿ ಶುಕ್ರವಾರ ಚಾಲನೆ ನೀಡಿದರು .

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ವಾಗತ ಕೋರಿದರು. ಬಜ್ಪೆ ವಿಮಾನ ನಿಲ್ದಾಣದಿಂದ ಬಂಗ್ರಕೂಳೂರು ಮೈದಾನದ ಸಮೀಪಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದರು.

ಇಂದು ಚಾಲನೆ ನೀಡಿದ 3,700 ಕೋಟಿ ರು ಯೋಜನೆಗಳ ನೀಲನಕ್ಷೆ 3ಡಿ ಮಾಡೆಲ್​​ಅನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದರು.

ಈ ವೇಳೆ ಪ್ರಧಾನಿ ಮೋದಿ ಅವರಿಗೆ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಸರ್ಬಾನಂದ ಸೋನವಾಲ್, ರಾಜ್ಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸುನಿಲ್‌ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.

ಪ್ರಧಾನಿಗಳ ಸಾರ್ವಜನಿಕ ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಕೃಷಿ ಸಮ್ಮಾನ್, ವಿದ್ಯಾನಿಧಿ ಕಾರ್ಯಕ್ರಮ ಸೇರಿದಂತೆ ಹಲವು ಫಲಾನುಭವಿಗಳ ಭಾಗಿಯಾಗಿದ್ದರು.

ಪ್ರಧಾನಿಗಳು ತಮ್ಮ ಕೈಯಿಂದ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಿದರು. ಆ ಬಳಿಕ ಮತ್ಸ್ಯ ಸಮೃದ್ಧಿ ಯೋಜನೆ ಸೇರಿದಂತೆ 3,700 ಕೋಟಿ ಯೋಜನೆಗಳಿಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

Share This Article
Leave a comment