October 17, 2021

Newsnap Kannada

The World at your finger tips!

ರಾಜಕಾರಣವನ್ನು ಕೇವಲ‌ ಒಂದು ತಿಂಗಳು ಮಾತ್ರ ಮಾಡೋಣ: ಸಿಎಂ

Spread the love

ಐದು ವರ್ಷದ ಅಧಿಕಾರ ಅವಧಿಯಲ್ಲಿ ನಾವು 59 ತಿಂಗಳು ಅಭಿವೃದ್ಧಿ, ಒಂದು ತಿಂಗಳ ಮಾತ್ರ ರಾಜಕಾರಣ ಮಾಡೋಣ ಎಂದು ಸಿಎಂ‌ ಬಸವರಾಜ ಬೊಮ್ಮಾಯಿ ರಾಜಕಾರಣಿಗಳಿಗೆ ಕಿವಿ ಮಾತು ಹೇಳಿದರು. ‌

ಹುಬ್ಬಳ್ಳಿಯಲ್ಲಿ ನೂತನ ಪೊಲೀಸ್ ಠಾಣೆಗಳ ಶಂಕುಸ್ಥಾಪನೆ ಕಾರ್ಯಕ್ರಮ ನೇರವೆರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ , ರಾಜಕಾರಣ ಮಾಡಲಿಕ್ಕೆ ಘೋಡಾ ಹೈ ಮೈದಾನ್ ಹೈ ಎಂದರು.

ಸಬ್ ಲೋಗ್ ಹಮಕೋ ಪೇಯಚಾನ್ ಹೈ ಇದರ್ ( ರಾಜಕರಾಣ ಮಾಡಲು ಕುದುರೇನು ಇದೆ, ಮೈದಾನವು ಇದೆ. ಇಲ್ಲಿ ನಮಗೆ ಎಲ್ಲರೂ ಗೊತ್ತಿದ್ದವರೇ) ಎಂದು ಹಿಂದಿಯಲ್ಲೇ ಕಾರ್ಯಕ್ರಮಕ್ಕೆ ಬಂದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಹುಬ್ಬಳ್ಳಿಯ ಕೆಲ ಬಡಾವಣೆಗಳ ಹೆಸರು ಹೇಳಿದರು.

ರಾಜಕಾರಣ ಮಾಡುವಾಗ ಗೆರೆ ಹಾಕಿ ರಾಜಕಾರಣ ಮಾಡೋಣ, ಆದರೆ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡೋಣ. ಡಿಜಿಯಿಂದ ಹಿಡಿದು ಕಾನ್ ಸ್ಟೇಬಲ್ ರವರೆಗೂ ಎಲ್ಲರೂ ಫೀಲ್ಡಿಗಿಳಿದು ಕೆಲಸ ಮಾಡಬೇಕು. ಕೇವಲ ಆಫೀಸ್‍ನಲ್ಲಿ ಕುಳಿತು ಆರ್ಡರ್ ಮಾಡಿದರೆ ಆಗಲ್ಲ. ಹುಬ್ಬಳ್ಳಿ ಧಾರವಾಡ ಕಾನೂನು ಸುವ್ಯವಸ್ಥೆ ಬಹಳ ಸುಧಾರಿಸಿದೆ. ಇದು ಬಹಳ ಶಾಂತಿಯುತ ನಗರ ಆದರೆ ಇತ್ತೀಚೆಗೆ ಇಲ್ಲಿ ಕೆಲ ಕಿಡಿಗೇಡಿಗಳು ಶಾಂತಿ ಕದಡುವ ಕಾರ್ಯ ಮಾಡುತ್ತಿದ್ದಾರೆ ಎಂದರು.

error: Content is protected !!