ರಾಜ್ಯ ಸರ್ಕಾರವೂ ತೈಲ ಸುಂಕ ಇಳಿಕೆ ಮಾಡಲಿ- ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎಂಬ ನಡೆ ಬೇಡ – HDK

Team Newsnap
1 Min Read

ಜನಾಕ್ರೋಶಕ್ಕೆ ಕೊನೆಗೂ ಮಣಿದಿರುವ ಕೇಂದ್ರ ಸರ್ಕಾರವೂ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದೆ. ಹೀಗಾಗಿ ತೈಲ ಬೆಲೆಗಳು ದೇಶಾದ್ಯಂತ ಕಡಿಮೆಯಾಗುತ್ತಿವೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯದ್ದೇ ಸರ್ಕಾರ ಸುಂಕ ಕಡಿತಕ್ಕೆ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HDK) ಟ್ವಿಟ್ ನಲ್ಲಿ ಹೇಳಿದ್ದಾರೆ.

https://twitter.com/hd_kumaraswamy/status/1528368112843689984?s=21&t=hNwDcPipuTS3iDH7nGFL6A

ಪಕ್ಕದ ರಾಜ್ಯ ಕೇರಳದಲ್ಲಿ ಈಗಾಗಲೇ ಸುಂಕ ಕಡಿತ ಮಾಡಲಾಗಿದೆ. ಆದರೆ, ರಾಜ್ಯ ಬಿಜೆಪಿ ಸರಕಾರವು ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವ ವ್ಯಾಪಾರಿ ಬುದ್ಧಿಯ ಜಾಣ ನಡೆ ಅನುಸರಿಸುತ್ತಿದೆ. ತೆರಿಗೆ ಕಡಿತದ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸಿಎಂ ಅವರು ಹೇಳಿರುವುದು ಒಪ್ಪುವ ಮಾತಲ್ಲ ಎಂದಿದ್ದಾರೆ.

ಇದನ್ನು ಓದಿ : ಫೇಸ್ ಬುಕ್ ನಲ್ಲಿ ಪರಿಚಯ- ಪ್ರೀತಿಯ ನಾಟಕ : ನಾಗಮಂಗಲದ ಯುವಕನಿಗೆ ಯಾಮಾರಿಸಿದ 50ರ ಆಂಟಿ !

ಅಧಿಕಾರದಲ್ಲಿ ಇರುವವರಿಗೆ ಅತಿ ಜಾಣತನ ಒಳ್ಳೆಯದಲ್ಲ. ಕೋವಿಡ್, ಸತತ ಬೆಲೆ ಏರಿಕೆಯಿಂದ ಹೈರಾಣ ಆಗಿರುವ ಜನರ ತಾಳ್ಮೆ ಪರೀಕ್ಷೆ ಮಾಡುವುದು ಒಳ್ಳೆಯದಲ್ಲ. ಕೂಡಲೇ ಸುಂಕ ಕಡಿತ ಮಾಡಿ ತೈಲ ಬೆಲೆ ಪ್ರಹಾರದಿಂದ ಬಸವಳಿದಿರುವ ಜನರಿಗೆ ನೆರವಾಗಬೇಕು ಎನ್ನುವುದು ಎಂದು ಟ್ವಿಟ್ ನಲ್ಲಿ ಆಗ್ರಹ ಮಾಡಿದ್ದಾರೆ.

Share This Article
Leave a comment