ಜಿಪಂ – ತಾಪಂ ಚುನಾವಣೆಗೆ ಪೂರ್ವ ಸಿದ್ದತೆ – ಆಯಾ ಕ್ಷೇತ್ರಗಳ ಪುನರ್ ಸೀಮಾ ನಿಗದಿಗೆ ಆಯೋಗ ಸೂಚನೆ

Team Newsnap
1 Min Read

ಜಿಪಂ ಮತ್ತು ತಾಪಂ ಚುನಾವಣೆಗೆ ಸಿದ್ದತೆಗಳನ್ನು ಆರಂಭಿಸಿರುವ ಸರ್ಕಾರ , ಈ ಮೊದಲಿಗೆ ನಿಗದಿ ಮಾಡಲಾಗಿದ್ದ ಕ್ಷೇತ್ರ ವಿಂಗಡನೆ ಹಾಗೂ ಮೀಸಲಾತಿ ರದ್ದು ಪಡಿಸಿ ಹೊಸದಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ಷೇತ್ರಗಳ ವಿಂಗಡನೆ ಸೀಮೆಗಳನ್ನು ನಿಗದಿ ಪಡಿಸಲು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವೇ ಇನ್ನು ತಾಪಂ – ಜಿಪಂಗಳ ಕ್ಷೇತ್ರದ ಸೀಮೆ ಹಾಗೂ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ.

ಈ ಮೊದಲು ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ವಿಂಗಡಣೆಯ ವ್ಯಾಪ್ತಿ , ಮೀಸಲಾತಿ ನಿಗದಿ ಮಾಡುವಂತಹ ಕೆಲಸಗಳನ್ನು ಚುನಾವಣಾ ಆಯೋಗ ಮಾಡುತ್ತಿತ್ತು, ಈಗ ಆ ಎಲ್ಲಾ ಕೆಲಸಗಳನ್ನು ಸೀಮಾ ಅಯೋಗವೇ ಮಾಡಲಿದೆ.

ಸೀಮಾ ಆಯೋಗದ ಮಾರ್ಗದರ್ಶನ ಹಾಗೂ ಸೂಚನೆಯ ವಿವರ ಇಂತಿದೆ :

gp 1
gp 2
gp 3
Share This Article
Leave a comment