May 22, 2022

Newsnap Kannada

The World at your finger tips!

eshwarappa

ಈಶ್ವರಪ್ಪ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ಹಿಂದೂ ಮಹಾಸಭಾ ಸವಾಲು

Spread the love

‘ಈಶ್ವರಪ್ಪ ಲಂಚವನ್ನು ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ‘

ಇದು ಅಖಿಲ ಭಾರತ ಹಿಂದೂ ಮಹಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸವಾಲು

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿದ ಧರ್ಮೆಂದ್ರ ಅವರು, ನಾನು ಕಮೀಷನ್ ತಗೆದುಕೊಂಡಿಲ್ಲ, ಪ್ರಾಮಾಣಿಕ ಇದ್ದೇನೆ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಪ್ರಾಮಾಣಿಕರಾಗಿದ್ದರೆ ಈಶ್ವರಪ್ಪ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಹೇಳಿದರು.

ಮಂತ್ರಿ ಮಂಡಲದ ಯಾವೊಬ್ಬ ವ್ಯಕ್ತಿಯೂ ಲಂಚ ಪಡೆದಿಲ್ಲ ಎಂದು ಹೇಳಲಿ. ಈ ಪ್ರಕರಣದಲ್ಲಿ 40% ಕಮೀಷನ್ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ ಸವಾಲು ಹಾಕಿದರು

ಈಶ್ವರಪ್ಪ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದೀರಾ? ಪ್ರಮಾಣ ಮಾಡುವ ಆ ತಾಕತ್ತು ನಿಮಗಿದೆಯಾ? ನೀವು ಧರ್ಮಸ್ಥಳ ದೇವರನ್ನು ಒಪ್ಪುತ್ತೀರಿ ಅಂತಾದರೆ ಅಲ್ಲಿಗೆ ಬನ್ನಿ ಎಂದರು.

ಅಲ್ಲಿ ನೀವು ಪ್ರಮಾಣ ಮಾಡಿದ್ರೆ ನೀವು ಪ್ರಾಮಾಣಿಕ ಅಂತಾ ಒಪ್ಪಿಕೊಳ್ಳೊಣ. ಪ್ರಮಾಣ ಮಾಡಿಯೂ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದ್ರೆ ಧರ್ಮದ್ರೋಹಿ ಆಗುತ್ತೀರಿ. ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಈ ದೇಶವನ್ನು ಲೂಟಿ ಮಾಡಿದೆ ಎಂದು ಹೇಳಿದ್ರಿ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಕ್ಕೆ ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ರಿ. ಆದ್ರೆ ಈಗ ನೀವು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

error: Content is protected !!