ಮೈಸೂರಲ್ಲೂ ಚಿರತೆ ಭೀತಿ: ಮೇಟಗಹಳ್ಳಿ ಸುತ್ತಮುತ್ತಲ ಶಾಲೆಗಳಿಗೆ ರಜೆ

Team Newsnap
1 Min Read

ಮೈಸೂರಿಗೂ ಚಿರತೆ ಭೀತಿ ಶುರುವಾಗಿದೆ. ಮೈಸೂರಿನ ಆರ್.ಬಿ.ಐ. ನೌಕರರಿಗೆ ಚಿರತೆ ಕಾಟ ಜಾಸ್ತಿಯಾಗಿದೆ. ಕಳೆದ 2 ವಾರದಿಂದ ಚಿರತೆ ಫ್ಯಾಮಿಲಿಯ ಓಡಾಟ ಹೆಚ್ಚಾಗಿದೆ.

ಮೇಟಗಹಳ್ಳಿ ಬಳಿಯ ಆರ್.ಬಿ.ಐ. ಬಳಿ ನೌಕರರು, ಕುಟುಂಬಸ್ಥರು ಭಯಭೀತರಾಗಿದ್ದಾರೆ. ಮೈಸೂರಿನ ಹೊರ ವಲಯದ ಮೇಟಗಳ್ಳಿಯ ನೋಟು ಮುದ್ರಣಾಲಯ ಸುತ್ತ ಚಿರತೆ ಫ್ಯಾಮಿಲಿ ಬೀಡು ಬಿಟ್ಟಿದೆ.

ಎರಡು ಮರಿಗಳೊಂದಿಗೆ ತಾಯಿ ಚಿರತೆ ಸಂಚಾರ ಮಾಡುತ್ತಿರುವ ಚಿರತೆ ಕಂಡು ನೌಕರರು ಕಂಗೆಟ್ಟಿದ್ದಾರೆ. ಬೀದಿ ನಾಯಿಗಳನ್ನು ಎಳೆದೊಯ್ದಿರುವ ಚಿರತೆ, ದಿನದಿಂದ ದಿನಕ್ಕೆ ಈ ಭಾಗದಲ್ಲಿ ನಾಯಿಗಳು ಕೊಂದು ತಿನ್ನುತ್ತಿವೆ. ಇದನ್ನು ಓದಿ – ಬೆಂಗಳೂರು ,ಮಂಡ್ಯ ಮೈಸೂರು ಸೇರಿ ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ

ಜನರು ಮನೆಯಿಂದ ಹೊರಗೆ ಬರಲೂ ಹೆದರುತ್ತಿದ್ದಾರೆ. ಹೀಗಾಗಿ ಈ ಭಾಗದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ವಾರದಿಂದ ರಜೆ ನೀಡಲಾಗಿದೆ. ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿ. ಎರಡು ಕಡೆ ಬೋನ್ ಇಟ್ಟರೂ ಇದುವರೆಗೂ ಚಿರತೆ ಸೆರೆಯಾಗಿಲ್ಲ.

Share This Article
Leave a comment