ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳಿಗೆ ಬಿಟ್ಟು ಕೊಡಿ – ಡಿಸಿ ಗೆ ಮನವಿ

Team Newsnap
1 Min Read

ವಾರಣಾಸಿಯ ಜ್ಞಾನವ್ಯಾಪಿ ಮಸೀದಿ ಸಮೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಇದೀಗ ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿಯನ್ನು ಸಮೀಕ್ಷೆ ನಡೆಸಿ ಹಿಂದೂಗಳಿಗೆ ಬಿಟ್ಟುಕೊಂಡುವಂತೆ ಆಗ್ರಹ ಕೇಳಿ ಬರುತ್ತಿದೆ.

ಶ್ರೀರಂಗಪಟ್ಟದಲ್ಲಿರುವ ಜಾಮಿಯಾ ಮಸೀದಿ ಈ ಹಿಂದೆ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಾಗಿತ್ತು. ಆ ದೇವಸ್ಥಾನ ಕೆಡವಿ ಟಿಪ್ಪು ಸುಲ್ತಾನ್ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಹೀಗಾಗಿ ಮಸೀದಿಯನ್ನು ತೆರವುಗೊಳಿಸಿ ಮತ್ತೆ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಬೇಕೆಂಬ ಆಗ್ರಹವಾಗಿದೆ.

ಇದನ್ನು ಓದಿ : ಶ್ರೀರಂಗಪಟ್ಟಣದ ಮಸೀದಿ ದ್ವಂಸ ಹನುಮ ಮಂದಿರ ನಿರ್ಮಾಣ : ವಿವಾದಾತ್ಮಕ ಹೇಳಿಕೆ: ಕಾಳಿ ಸ್ವಾಮಿ ಬಂಧನ

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯನ್ನು ಸಮೀಕ್ಷೆ ನಡೆಸಿ ಆಂಜನೇಯಸ್ವಾಮಿ ದೇವಸ್ಥಾನವನ್ನು ಮರು ನಿರ್ಮಾಣ ಮಾಡಬೇಕೆಂದು ಹಿಂದೂಪರ ಮುಖಂಡರು ಆಗ್ರಹಿಸಿದ್ದಾರೆ.

1784ರಲ್ಲಿ ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿಯನ್ನು ಟಿಪ್ಪು ಸುಲ್ತಾನ್ ನಿರ್ಮಾಣ ಮಾಡಿದ್ದ. ಈ ಹಿಂದೆ ಈ ಜಾಗದಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಿತ್ತು. ಆ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಪುರಾವೇ ಎಂಬಂತೆ ಇಂದಿಗೂ ಜಾಮಿಯಾ ಮಸೀದಿಯ ಒಳ ಭಾಗದಲ್ಲಿ ಹಿಂದೂ ದೇವಸ್ಥಾನದಲ್ಲಿರುವ ರೀತಿಯಲ್ಲಿ ಕಲ್ಯಾಣಿ, ಬಾವಿಗಳು ಇವೆ. ಅಲ್ಲದೇ ಮಸೀದಿಯ ಸುತ್ತ ಹಿಂದೂ ದೇವಸ್ಥಾನದ ಕಂಬಗಳು ಕಂಬಗಳ ಮೇಲೆ ಹಿಂದೂ ದೇವರುಗಳ ಮೂರ್ತಿ ಕೆತ್ತನೆಗಳು ಇವೆ. ಇದಲ್ಲದೇ ಲೂಯಿಸ್ ರೈಸ್ ಬರೆದಿರುವ ಮೈಸೂರು ಗೆಜೆಟ್‍ನಲ್ಲಿ, ಟಿಪ್ಪು ಸುಲ್ತಾನ್ ಪರ್ಷಿಯಾದ ಖಲೀಫನಿಗೆ ಬರೆದಿರುವ ಪತ್ರಗಳಲ್ಲೂ ಹಿಂದೂ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಬರೆಯಲಾಗಿದೆ.

ಈ ಎಲ್ಲಾ ಸಂಗತಿಗಳನ್ನು ಆಧಾರವನ್ನಾಗಿಟ್ಟುಕೊಂಡು ಜಾಮಿಯಾ ಮಸೀದಿಯಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ಆರಾಧನೆಗೆ ಅವಕಾಶ ನೀಡಬೇಕೆಂದು ನರೇಂದ್ರ ಮೋದಿ ವಿಚಾರ ಮಂಚ್‍ನ ಪದಾಧಿಕಾರಿಗಳು ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Share This Article
Leave a comment