December 18, 2024

Newsnap Kannada

The World at your finger tips!

kashmir

ಕಾಶ್ಮೀರ ತೊರೆಯಿರಿ – ಕಾಶ್ಮೀರಿ ಪಂಡಿತರಿಗೆ ಲಷ್ಕರ್-ಎ-ಇಸ್ಲಾಂ ಬೆದರಿಕೆ

Spread the love

ಕಾಶ್ಮೀರಿ ಪಂಡಿತರು ಭಯೋತ್ಪಾದಕರ ನಿರಂತರ ಗುರಿಯಾಗಿದ್ದಾರೆ

ಕಾಶ್ಮೀರಿ ಪಂಡಿತರು ಕಣಿವೆಯನ್ನ ತೊರೆಯಬೇಕು ಅಥವಾ ಸಾವಿಗೆ ಸಿದ್ಧರಾಗಬೇಕು ಎಂದು ಭಯೋತ್ಪಾದಕರು ಬಿಡುಗಡೆ ಮಾಡಿದ ಪೋಸ್ಟರ್ʼನಲ್ಲಿ ತಿಳಿಸಲಾಗಿದೆ. ಕಾಶ್ಮೀರಿ ಪಂಡಿತರು ಭಯೋತ್ಪಾದಕರ ನಿರಂತರ ಗುರಿಯಾಗಿದ್ದಾರೆ ಎಂಬುದು ನಿಜ. ಪುಲ್ವಾಮಾದ ಹವಾಲ್ ಟ್ರಾನ್ಸಿಟ್ ನಿವಾಸದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತನಿಗೆ ಲಷ್ಕರ್-ಎ-ಇಸ್ಲಾಂ ಎಂಬ ಭಯೋತ್ಪಾದಕ ಸಂಘಟನೆ ಬೆದರಿಕೆ ಹಾಕಿದೆ.

ಇದನ್ನು ಓದಿ – ಮಂಡ್ಯ ಜಿಲ್ಲೆಯ ಪ್ರವೇಶಕ್ಕೆ ಋಷಿಕುಮಾರ್ , ಮುತಾಲಿಕ್ ಗೆ ಶಾಶ್ವತ ನಿರ್ಬಂಧಕ್ಕೆ ಒತ್ತಾಯ -ಪ್ರಗತಿಪರರ ಪ್ರತಿಭಟನೆ

ಟ್ರಾನ್ಸಿಟ್ ವಸತಿಗೃಹ

ಟ್ರಾನ್ಸಿಟ್ ವಸತಿಗೃಹದಲ್ಲಿ ವಾಸಿಸುವ ಹೆಚ್ಚಿನ ಕಾಶ್ಮೀರಿ ಪಂಡಿತರು ಸರ್ಕಾರಿ ಕೆಲಸಗಳನ್ನು ಮಾಡುತ್ತಾರೆ. 5000 ಕಾಶ್ಮೀರಿ ಪಂಡಿತ ಸರ್ಕಾರಿ ನೌಕರರು ಕೆಲವು ವರ್ಷಗಳ ಹಿಂದೆ ಪಿಎಂ ಪ್ಯಾಕೇಜ್ ಅಡಿಯಲ್ಲಿ ಸರ್ಕಾರಿ ಉದ್ಯೋಗಗಳನ್ನ ನೀಡಿದ್ರೂ ಕಾಶ್ಮೀರದಲ್ಲಿ ಉಳಿಯಲು ಸಿದ್ಧರಿಲ್ಲ. ಕಾಶ್ಮೀರಕ್ಕೆ ಹೋಗಿ ಕೆಲಸ ಮಾಡಬೇಕು ಎಂಬ ಷರತ್ತಿನ ಮೇಲೆ ಈ ಉದ್ಯೋಗಗಳನ್ನ ನೀಡಲಾಯಿತು ಮತ್ತು ಅವ್ರು ಅಲ್ಲಿ ಸುರಕ್ಷಿತವೆಂದು ಪರಿಗಣಿಸಲಾದ ಪ್ರದೇಶಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಯಿತು.

volience

ಕಳೆದ ವರ್ಷ ಅಕ್ಟೋಬರ್ 7 ರಂದು, ಭಯೋತ್ಪಾದಕರು ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಮುಂದೆ ಅಲ್ಪಸಂಖ್ಯಾತ ಸಮುದಾಯದ ಪ್ರಾಂಶುಪಾಲರು ಮತ್ತು ಶಿಕ್ಷಕರನ್ನ ಗುಂಡಿಕ್ಕಿ ಕೊಂದಾಗ, ಮತ್ತೊಂದು ಭಯೋತ್ಪಾದಕ ಗುಂಪು ಬೆದರಿಕೆಯನ್ನು ಹಾಕಿತ್ತು.

ಎಲ್ಲಾ ವಲಸಿಗರು ಮತ್ತು ಆರ್‌ಎಸ್‌ಎಸ್‌ ಏಜೆಂಟರು ಕಾಶ್ಮೀರವನ್ನ ತೊರೆಯಬೇಕು ಅಥವಾ ಸಾವನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಬೆದರಿಕೆಯಲ್ಲಿ ಬರೆಯಲಾಗಿದೆ. ಕಾಶ್ಮೀರವನ್ನು ಮತ್ತೊಂದು ಇಸ್ರೇಲ್ ನ್ನಾಗಿ ಮಾಡಲು ಮತ್ತು ಕಾಶ್ಮೀರಿ ಮುಸ್ಲಿಮರನ್ನ ಕೊಲ್ಲಲು ಬಯಸುವ ಕಾಶ್ಮೀರ ಪಂಡಿತರಿಗೆ ಇಲ್ಲಿ ಜಾಗವಿಲ್ಲ.ಎಂದು ಹವಾಲ್ ಟ್ರಾನ್ಸಿಟ್ ವಸತಿಯ ಅಧ್ಯಕ್ಷರನ್ನು ಉದ್ದೇಶಿಸಿ ಪೋಸ್ಟರ್ ಬರೆಯಲಾಗಿದೆ.

ಇದನ್ನು ಓದಿ – ಮೈಸೂರಿನಲ್ಲಿ ಭಾರಿ ಮಳೆ ಕೊಚ್ಚಿ ಹೋದ ಸೇತುವೆ – ಕುಸಿದ ರಸ್ತೆ

ಪಿಎಂ ಪ್ಯಾಕೇಜ್‌ನ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ?

ಬುದ್ಗಾಮ್‌ನ ಕಂದಾಯ ಇಲಾಖೆಯ ಅಧಿಕಾರಿ ರಾಹುಲ್ ಭಟ್ ಅವರನ್ನ ಭಯೋತ್ಪಾದಕರು ಕೊಂದಿರುವುದರಿಂದ, ಪಿಎಂ ಪ್ಯಾಕೇಜ್‌ನ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುವ ಬೆದರಿಕೆ ಹಾಕುತ್ತಿದ್ದಾರೆ. ಅನೇಕರು ಕಾಶ್ಮೀರವನ್ನ ತೊರೆದು ಜಮ್ಮುವಿನಲ್ಲಿರುವ ತಮ್ಮ ಮನೆಗಳಿಗೆ ಬಂದಿದ್ದಾರೆ ಎಂದು ಮಾಹಿತಿ ಹೇಳುತ್ತದೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮ್ಮುವಿನಲ್ಲಿ ರಾಹುಲ್ ಭಟ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ, ಕುಟುಂಬಕ್ಕೆ ಆರ್ಥಿಕ ನೆರವು ಮತ್ತು ಅವರ ಮಗಳ ಶಿಕ್ಷಣದ ವೆಚ್ಚಗಳನ್ನು ಘೋಷಿಸಿದ್ದಾರೆ. ಆದರೆ ಈ ಘಟನೆಯಿಂದ ಕೋಪಗೊಂಡ ಕಾಶ್ಮೀರಿ ಪಂಡಿತರು ದೇಶದ ಅನೇಕ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ವಾಸ್ತವವಾಗಿ, ಕಾಶ್ಮೀರದಲ್ಲಿ ಒಂದು ಕಾಲದಲ್ಲಿ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರನ್ನು ನೆಲೆಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಭಯೋತ್ಪಾದಕರು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ ಬಗ್ಗೆ ಕಣಿವೆಯಲ್ಲಿ ಆತಂಕ ಮತ್ತು ಆಕ್ರೋಶ ಹೆಚ್ಚುತ್ತಿದೆ.

Copyright © All rights reserved Newsnap | Newsever by AF themes.
error: Content is protected !!