ಮೈಸೂರಿನಲ್ಲಿ ಭಾರಿ ಮಳೆ ಕೊಚ್ಚಿ ಹೋದ ಸೇತುವೆ – ಕುಸಿದ ರಸ್ತೆ

Team Newsnap
1 Min Read

ಮೈಸೂರಿನ ಹೊರವಲಯದಲ್ಲಿರುವ ಬೋಗಾದಿ ಕೆರೆ ತುಂಬಿ ಹರಿಯುತ್ತಿದೆ. ಇದರಿಂದ ರಿಂಗ್ ರಸ್ತೆಯಿಂದ ಅಮೃತಾನಂದಮಯಿ ವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯದ ಸೇತುವೆಯೇ ನೀರಿನಲ್ಲಿ ಕೊಚ್ಚಿಹೋಗಿದೆ. ಇಡೀ ರಸ್ತೆ ಕುಸಿತವಾಗಿದೆ.

WhatsApp Image 2022 05 17 at 12.05.27 PM

ಧಾರಾಕಾರ ಮಳೆಯಿಂದ ಬೋಗಾದಿಯ ನಾಗಲಿಂಗೇಶ್ವರ ದೇವಸ್ಥಾನದ ಬಳಿಯ ರಸ್ತೆ ಕೊಚ್ಚಿ ಹೋಗಿದೆ. ಬೋಗಾದಿ ಗ್ರಾಮಕ್ಕೆ ತೆರಳುವ ಸಂಪರ್ಕ ಕಡಿತಗೊಂಡಿದೆ. ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಇದನ್ನು ಓದಿ : 2024ರ ಲೋಕಸಭಾ ಚುನಾವಣೆಗೆ 8 ಮಂದಿ ಹಾಲಿ MPಗಳಿಗೆ ಬಿಜೆಪಿ ಟಿಕೆಟ್ ಇಲ್ಲ ? ಯುವಕರಿಗೆ ಆದ್ಯತೆ

ನಗರದಲ್ಲಿ ಬಿಟ್ಟೂ ಬಿಡದೇ ಸುರಿದ ಮಳೆಯಿಂದಾಗಿ ಬೋಗಾದಿ ಕೆರೆ ತುಂಬಿ ಹರಿಯುತ್ತಿದ್ದು, ವಿವಿಧ ಬಡಾವಣೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಆನಂದ ನಗರವೂ ಅಕ್ಷರಶಃ ಜಲದಿಗ್ಬಂಧನಕ್ಕೆ ಒಳಗಾಗಿದೆ. ಬಹುತೇಕ ನಿವಾಸಿಗಳು ನಿನ್ನೆಯಿಂದ ಮನೆಯೊಳಗೇ ಇದ್ದಾರೆ. ಮಳೆ ನೀರು ಮನೆಯ ಗೇಟ್‌ವರೆಗೂ ತುಂಬಿದ್ದು, ಇಂದೂ ಸಹ ಮಳೆಯಾದರೆ, ನೀರು ಮನೆಗಳಿಗೆ ನುಗ್ಗುವುದು ನಿಶ್ಚಿತವಾಗಿದೆ.

60 ಅಡಿ ಅಗಲವಿದ್ದ ಆನಂದ ನಗರ ರಾಜಕಾಲುವೆಯನ್ನು ಒತ್ತುವರಿ ಮಾಡಿದ ಪರಿಣಾಮ 15 ಅಡಿಗೆ ತಲುಪಿದ್ದು, ನೀರು ರಸ್ತೆ ಮೇಲೆ ಹರಿಯುತ್ತಿದೆ. ಕೊಳಚೆ ನೀರಿನಲ್ಲಿ ಜನರು ಸಂಕಷ್ಟ ಅನುಭವಿಸುತ್ತಿದ್ದು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a comment