ಅಂತರ್ ಧರ್ಮಿಯ ಮದುವೆಗಾಗಿ ಬಲವಂತವಾಗಿ ಮತಾಂತರ ನಡೆಸಿದರೆ ಅವರನ್ನು ‘ರಾಮ ನಾಮ ಸತ್ಯ ಪ್ರಯಾಣ’ಕ್ಕೆ ಕಳುಹಿಸಿಕೊಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೇ , ರಾಜ್ಯದಲ್ಲಿ ‘ಲವ್ ಜಿಹಾದ್’ ತಡೆಯಲು ಸರ್ಕಾರ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಕಾನೂನು ತರುವುದಾಗಿ ತಿಳಿಸಿದ್ದಾರೆ.
ವಿವಾಹದ ಸಂದರ್ಭದಲ್ಲಿ ಮತಾಂತರ ಅಗತ್ಯವಿಲ್ಲ ಎಂದು ಅಲಹಾಬಾದ್ ಹೈ ಕೋರ್ಟ್ ತಿಳಿಸಿದೆ. ಈ ಹೇಳಿಕೆ ಬೆನ್ನಲ್ಲೇ ಇಂದು ಮಾತನಾಡಿರುವ ಸಿಎಂ ಆದಿತ್ಯನಾಥ, ಲವ್ ಜಿಹಾದ್ ತಡೆಯಲು ಸರ್ಕಾರ ಕೆಲಸ ಮಾಡುತ್ತದೆ. ಗುರುತು ಮರೆ ಮಾಚಿ ನಮ್ಮ ಸಹೋದರರಿಯರ ಗೌರವದ ವಿರುದ್ಧ ಆಟವಾಡುವವರು, ಇನ್ನಾದರೂ ತಮ್ಮ ದಾರಿ ಸರಿಪಡಿಸಿಕೊಳ್ಳದಿದ್ದರೆ, ಅವರಿಗೆ ರಾಮ್ ನಾಮ್ ಸತ್ಯ ಪ್ರಯಾಣ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಹೇಳಿಕೆ ಬಗ್ಗೆ ಕೊನೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ‘ಲವ್ ಜಿಹಾದ್’ ಮಾಫಿಯಾದಲ್ಲಿ ತೊಡಗಿರುವ ಅಪರಾಧಿಗಳಿಗೆ ಈ ಎಚ್ಚರಿಕೆ ಎಂದಿದ್ದಾರೆ.
ಮದುವೆ ಕಾರಣದಿಂದಾಗಿ ಧರ್ಮ ಬದಲಾಯಿಸಿಕೊಳ್ಳುವುದು ಮಾನ್ಯವಲ್ಲ ಎಂದು ಅಲಹಾಬಾದ್ ಕೋರ್ಟ್ ತಿಳಿಸಿದೆ. ನವ ದಂಪತಿಗಳ ಪ್ರಕರಣವೊಂದರಲ್ಲಿ ಈ ಹೇಳಿಕೆ ನೀಡಿದ್ದು, ಅವರ ಅರ್ಜಿ ವಜಾಗೊಳಿಸಲಾಗಿದೆ.
ಅಂತರ್ ಧರ್ಮಿಯ ಮದುವೆಯಿಂದ ತೊಡಗು ಉಂಟಾಗಬಹುದು ಎಂದು ಪೊಲೀಸರಿಗೆ ನಿರ್ದೇಶಿಸಲು ಯುವತಿಯ ತಂದೆ ನ್ಯಾಯಾಲಯ ಮೊರೆ ಹೋಗಿದ್ದರು.
ಬಲಪಂಥೀಯ ಗುಂಪುಗಳ ಪ್ರಕಾರ ‘ಲವ್ ಜಿಹಾದ್’ ಎಂಬುದು ಪಿತೂರಿಯಾಗಿದೆ. ಮುಸ್ಲಿಂ ಸಮುದಾಯಕ್ಕೆ ಮಹಿಳೆಯರನ್ನು ಮತಾಂತರಗೊಳಿಸುವ ಉದ್ದೇಶದಿಂದ ತಮ್ಮ ನಿಜ ವ್ಯಕ್ತಿತ್ವ ಮರೆಮಾಚಿ ಅವರನ್ನು ಕೆಲವು ಯುವಕರು ಮದುವೆಯಾಗುತ್ತಾರೆ ಎನ್ನಲಾಗಿದೆ.
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ
ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ