ಚೀನಿ ಲಸಿಕೆ ಪಡೆದ ರಾಷ್ಟ್ರಗಳಲ್ಲಿ ಕೊರೋನಾ ಭಾರೀ ಹೆಚ್ಚಳ

Team Newsnap
1 Min Read

ಚೀನಾ ಲಸಿಕೆ ಪಡೆದ ದೇಶಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದು ಅಂಕಿ ಅಂಶದಿಂದ ಬಯಲಾಗಿದೆ.

ಸಿನೋಫಾರ್ಮ ಮತ್ತು ಸಿನೋವ್ಯಾಕ್ ಹೆಸರಿನ ಎರಡು ಲಸಿಕೆಗಳನ್ನು ಅಭಿವೃದ್ಧಿ ಪಡಿಸಿರುವ ಚೀನಾ ತನ್ನ ಆಪ್ತ ರಾಷ್ಟ್ರಗಳಿಗೆ ಹಂಚಿಕೆ ಮಾಡಿದೆ.

ಈ ಪೈಕಿ ಸೀಶೆಲ್ಸ್, ಚಿಲಿ, ಬಹರೇನ್ ಮತ್ತು ಮಂಗೋಲಿಯಾದಲ್ಲಿ ಕನಿಷ್ಟ ಒಂದು ಡೋಸ್ ಲಸಿಕೆ ನೀಡಿದ್ದರೂ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿನ ಪ್ರಮಾಣ ಈಗಲೂ ಹೆಚ್ಚಿದೆ ಎಂದು ಹೇಳಲಾಗಿದೆ.

ಕಳೆದ ವಾರ ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಈ 4 ರಾಷ್ಟ್ರಗಳು ಟಾಪ್ 10 ಪಟ್ಟಿಯಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ.

ಸೀಶೆಲ್ಸ್ ನಲ್ಲಿ 10 ಲಕ್ಷ ಜನಸಂಖ್ಯೆಗೆ 716 ಪ್ರಕರಣಗಳು ಪತ್ತೆ ಆಗುತ್ತಿದೆ. ಮಂಗೋಲಿಯಾದಲ್ಲಿ ಶೇ.52ರಷ್ಟುಜನರಿಗೆ ಪೂರ್ಣ ಪ್ರಮಾಣದ ಲಸಿಕೆ ನೀಡಿದ್ದರೂ ಭಾನುವಾರ 2,400 ಹೊಸ ಪ್ರಕರಣಗಳು ಪತ್ತೆ ಆಗಿವೆ.

ವಿಶ್ವದ ಇತರ ಲಸಿಕೆಗಳಿಗೆ ಹೋಲಿಸಿದರೆ ರೂಪಾಂತರಿ ವೈರಸ್ ವಿರುದ್ಧ ಚೀನಾ ಲಸಿಕೆಗಳು ಅಷ್ಟೇನು ಪರಿಣಾಮಕಾರಿಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಿನೋಫಾರ್ಮಾ ಲಸಿಕೆ ಕೋವಿಡ್ ವಿರುದ್ಧ ಶೇ.78ರಷ್ಟು ಮತ್ತು ಸಿನೋವ್ಯಾಕ್ ಕೇವಲ ಶೇ.51ರಷ್ಟು ಮಾತ್ರ ಪರಿಣಾಮಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Share This Article
Leave a comment