ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ – ಹತ್ತು ಲಕ್ಷ ಹೂವಿನಲ್ಲಿ ಎದ್ದುನಿಲ್ಲಲಿದೆ ವಿಧಾನಸೌಧ

Team Newsnap
1 Min Read

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಎಂದಿನಂತೆ ಈ ವರ್ಷವೂ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ರಾಜಧಾನಿ ಸಜ್ಜಾಗಿದೆ. ಹತ್ತು ಲಕ್ಷ ಹೂಗಳಿಂದ ನಿರ್ಮಾಣಗೊಳ್ಳುತ್ತಿರುವ ವಿಧಾನ ಸೌಧದ ಪ್ರತಿಕೃತಿ ಈ ಬಾರಿಯ ಮುಖ್ಯ ಆಕರ್ಷಣೆಯಾಗಲಿದೆ.ಆಗಸ್ಟ್ 4 ರಿಂದ 12 ದಿನಗಳ ಕಾಲ ಪುಷ್ಪ ಪ್ರದರ್ಶನ ನಡೆಯಲಿದೆ.

ಲಾಲ್‌ಬಾಗ್‌ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ, ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರ ಕೊಡುಗೆಯ ಗೌರವಾರ್ಥವಾಗಿ ಗಾಜಿನ ಮನೆಯಲ್ಲಿ ವಿಧಾನಸೌಧದ ಪ್ರತಿಕೃತಿಯನ್ನು ನಿರ್ಮಿಸಲಾಗುತ್ತಿದೆ. ವಿಧಾನಸೌಧದ ಪ್ರತಿಕೃತಿಯನ್ನು ತಯಾರಿಸಲು ಎರಡು ಲಕ್ಷ ಸೇವಂತಿಗೆ ಮತ್ತು 5.2 ಲಕ್ಷ ಗುಲಾಬಿ ಮತ್ತು ಶಿವಪುರ ಸತ್ಯಾಗ್ರಹ ಸೌಧ ಮಾಡಲು 3 ಲಕ್ಷ ಸೇವಂತಿಗೆ ಬಳಸಲಾಗುವುದು ಎಂದು ವಿವರಿಸಿದರು.

ಕೆಂಗಲ್ ಹನುಮಂತಯ್ಯ ಈ ಬಾರಿ ಫಲಪುಷ್ಪ ಪ್ರದರ್ಶನದ ಥೀಮ್ ಆಗಿರಲಿದ್ದು, ಅವರ ಕಾಲದಲ್ಲಿ ನಿರ್ಮಿಸಿದ ವಿಧಾನಸೌದ ಹೂಗಳಿಂದಲೇ ಎದ್ದು ನಿಲ್ಲಲಿದೆ. ಜೊತೆಗೆ ಕೋಲಾರದ ಚಿನ್ನದ ಗಣಿಯೂ ಸಹ ಸಾರ್ವಜನಿಕರ ಗಮನ ಸೆಳೆಯಲಿದೆ.

ಫಲಪುಷ್ಪ ಪ್ರದರ್ಶನಕ್ಕಾಗಿ ನೀಲಗಿರಿ, ಪುಣೆ, ತಿರುವನಂತಪುರಂ ಹಾಗೂ ಕೇರಳದಿಂದ ಹೂಗಳನ್ನು ತರಿಸಲಾಗುತ್ತಿದ್ದು, ಪ್ರದರ್ಶನದ ನಿರ್ವಹಣೆಗಾಗಿ 13 ಸಮಿತಿಗಳನ್ನು ರಚಿಸಲಾಗಿದೆ. ಭದ್ರಾವತಿ (VISL) ಕಬ್ಬಿಣ ಕಾರ್ಖಾನೆಗೆ ಸುವರ್ಣ ಯುಗ ಆರಂಭ

12 ದಿನಗಳ ಪ್ರದರ್ಶನಕ್ಕೆ 2.5 ಕೋಟಿ ರೂ.ವಿಧಾನ ಸೌಧದ ಪ್ರತಿಕೃತಿ ನಿರ್ಮಿಸಲು 5 ಲಕ್ಷ ಗುಲಾಬಿ ಹೂ, ಶಿವಪುರ ಸತ್ಯಾಗ್ರಹ ಸೌಧ ನಿರ್ಮಿಸಲು 3 ಲಕ್ಷ ಸೇವಂತಿಗೆ ಹೂ ಬಳಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

Share This Article
Leave a comment