ಜೆಡಿಎಸ್ ನಿಂದ ರಾಜ್ಯಸಭೆಗೆ ಕುಪೇಂದ್ರ ರೆಡ್ಡಿ ಟಿಕೆಟ್ ಪೈನಲ್

Team Newsnap
1 Min Read

ರಾಜ್ಯಸಭೆ ಚುನಾವಣೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕುಪ್ಪೇಂದ್ರ ರೆಡ್ಡಿ ಹೆಸರನ್ನು ಪಕ್ಷ ಅಂತಿಮಗೊಳಿಸಿದೆ. ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆದಿನ. ಹೀಗಾಗಿ ನಿನ್ನೆ ಬಿಜೆಪಿ, ಕಾಂಗ್ರೆಸ್ ತಮ್ಮ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಿವೆ. ಇದೀಗ ಜೆಡಿಎಸ್‌ ಕೂಡ ತನ್ನ ಅಭ್ಯರ್ಥಿಯನ್ನು ನಿರ್ಧರಿಸಿದೆ.

ಕುಪ್ಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಯಲು ನಿರ್ಧರಿಸಿದ ನಂತರ ಜೆಡಿಎಸ್‍ನಿಂದ ಬಿ ಫಾರಂ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನಾಮಪತ್ರ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ಕುಪ್ಪೇಂದ್ರ ರೆಡ್ಡಿ ಅವರು ಕಾಂಗ್ರೆಸ್ ನಾಯಕರ ಬೆಂಬಲ ಕೋರಿದ್ದಾರೆ. ಕಾಂಗ್ರೆಸ್ ನಡೆ ಮೇಲೆ ಮುಂದಿನ ತೀರ್ಮಾನ ಮಾಡಲು ನಿರ್ಧಾರ ಕೈಗೊಂಡಿದೆ.

ಕಾಂಗ್ರೆಸ್‍ನಿಂದ ಜೈರಾಮ್ ರಮೇಶ್ ಹಾಗೂ 2ನೇ ಅಭ್ಯರ್ಥಿ ಆಗಿ ಮನ್ಸೂರ್ ಖಾನ್‍ಗೆ ಟಿಕೆಟ್ ಸಿಕ್ಕಿದೆ. ಇತ್ತ ಒಂದು ವೇಳೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಿಸಿದರೆ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲ ಪಡೆಯಬೇಕಾದ ಪರಿಸ್ಥಿತಿ ಇರುತ್ತದೆ.

ಇದನ್ನು ಓದಿ : ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಜೈರಾಮ್ ರಮೇಶ್ ಟಿಕೆಟ್ : ನಾಯಕರಲ್ಲಿ ಅಸಮಾಧಾನ

ಭಾನುವಾರವಷ್ಟೇ ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ನಟ ಜಗ್ಗೇಶ್‌, ಕಾಂಗ್ರೆಸ್‌ನಿಂದ ಮಾಜಿ ಸಚಿವ ಜೈರಾಮ್‌ ರಮೇಶ್‌ ಹೆಸರು ಫೈನಲ್‌ ಆಗಿತ್ತು.  ಒಕ್ಕಲಿಗ ಕೋಟಾದಡಿ ಜಗ್ಗೇಶ್‍ಗೆ ಟಿಕೆಟ್ ನೀಡಲಾಗಿದೆ. ಅಲ್ಲದೇ ಹಳೇ ಮೈಸೂರು ಭಾಗದಲ್ಲಿ ಮತ ಸೆಳೆಯಲು ಬಿಜೆಪಿ ಯತ್ನಿಸಿದೆ. ನಿರ್ಮಲಾ ಸೀತಾರಾಮನ್ 2ನೇ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ.

Share This Article
Leave a comment