KSRTC ಬಸ್ ಬಾಡಿಗೆಯ ಕಿಲೋಮೀಟರ್ ದರ ಹೆಚ್ಚಳ : ಜನರಿಗೆ ಶಾಕ್

Team Newsnap
1 Min Read

ತೈಲ ದರಗಳ ಹೆಚ್ಚಳದ ಬೆನ್ನಲ್ಲೇ, ಕೆ ಎಸ್ ಆರ್ ಟಿ ಸಿ (KSRTC) ಕೂಡ ವಿವಿಧ ಕಾರ್ಯಗಳಿಗೆ ಬಾಡಿಗೆ ಪಡೆಯುವಂತ ಬಸ್ ಗಳ ಕಿಲೋಮೀಟರ್ ದರ ಹೆಚ್ಚಿಸಿದೆ.

ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಹೊರಡಿಸಿದ ಆದೇಶದಂತೆ ನಿಗಮದ ಬಸ್ಸುಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸಲು ವಿಧಿಸಬೇಕಾಗದ ದರ, ಕಿಲೋಮೀಟರ್ ಷರತ್ತು, ನಿಬಂಧನೆಗಳ ಸಂಬಂಧ ತಿಳಿಸಲಾಗಿದೆ.

ಇದನ್ನು ಓದಿ : ಬೆಂಗಳೂರಲ್ಲಿ ಭಯಂಕರ ಮಳೆ; ನದಿಯಂತಾದ ರಸ್ತೆಗಳು – ಸಾಕಷ್ಟು ಅವಾಂತರ , ಅನಾಹುತ

ಕೆ ಎಸ್ ಆರ್ ಟಿಸಿ ಬಸ್ಸುಗಳ ಸಾಂದರ್ಭಿಕ ಒಪ್ಪಂದದ ನೂತನ ದರ ಪಟ್ಟಿ :

  • ಕರ್ನಾಟಕ ಸಾರಿಗೆ – 55-47-49 ಆಸನ – ಕನಿಷ್ಠ 300 ಕಿಮೀ – ರಾಜ್ಯದೊಳಗೆ ರೂ.42 ಪ್ರತಿ ಕಿಲೋಮೀಟರ್ ದರ
  • ಅಂತರರಾಜ್ಯ ರೂ.45. ರಾಜಹಂಸ ಎಕ್ಸಿಕ್ಯೂಟಿವ್ – 36 ಆಸನಗಳು, ಕನಿಷ್ಠ 300 ಕಿಮೀ – ರಾಜ್ಯದೊಳಗೆ ರೂ.43, ಹೊರರಾಜ್ಯ ರೂ.48
  • ರಾಜಹಂಸ – 39 ಆಸನ, 300 ಕಿಮೀ – ರಾಜ್ಯ ರೂ.46, ಹೊರರಾಜ್ಯ ರೂ.50
    ರಾಜಹಂಸ ( 12 ಮೀಟರ್ ಚಾಸಿಸ್ ) – 44 ಆಸನ, 300 ಕಿಮೀ – ರಾಜ್ಯ ರೂ.48, ಹೊರರಾಜ್ಯ ರೂ.52
  • ಮೈಸೂರು ನಗರ ಸಾರಿಗೆ – 42 ಆಸನ, 250 ಕಿಮೀ – ರೂ.40 ಪ್ರತಿ ಕಿಲೋಮೀಟರ್
  • ಮಿನಿ ಬಸ್ಸು – 30 ಆಸನಗಳು, 250 ಕಿಮೀ – ಪ್ರತಿ ಕಿ.ಮೀ ರೂ.35
    ಇನ್ನೂ ಈ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ. ಆದ್ರೇ ಈ ಆದೇಶಕ್ಕೂ ಮೊದಲು ಬುಕ್ಕಿಂಗ್ ಮಾಡಿದವರಿಗೆ ಹಳೆಯ ದರಗಳೇ ಅನ್ವಯಿಸಲಿವೆ.
Share This Article
Leave a comment