ಬೆಂಗಳೂರಲ್ಲಿ ಭಯಂಕರ ಮಳೆ; ನದಿಯಂತಾದ ರಸ್ತೆಗಳು – ಸಾಕಷ್ಟು ಅವಾಂತರ , ಅನಾಹುತ

Team Newsnap
1 Min Read

ರಾಜಧಾನಿ ಬೆಂಗಳೂರು ಭಯಂಕರ ಮಳೆಗೆ ತತ್ತರಿಸಿದೆ. ಮಂಗಳವಾರ ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಸುರಿಯುತ್ತಿದ್ದ ರಾತ್ರಿ ಎಲ್ಲಾ 100 mm ಮಳೆ ಆಗಿದೆ. ರಾತ್ರಿ ಸುರಿದ ಭಯಂಕರ ಮಳೆಗೆ ಸಿಲಿಕಾನ್ ಸಿಟಿಯ ಮಂದಿ ಕಂಗಾಲಾಗಿದ್ದಾರೆ. ಕೆ.ಆರ್​.ಮಾರ್ಕೆಟ್​​, ಕಾರ್ಪೊರೇಷನ್​, ಲಾಲ್​ಬಾಗ್, ಶಾಂತಿನಗರ, ಮೆಜೆಸ್ಟಿಕ್​​, ಕೋರಮಂಗಲ, ಜಯನಗರ, ಮಲ್ಲೇಶ್ವರಂ, ಯಶವಂತಪುರ ಸೇರಿ ಹಲವೆಡೆ ಭಾರೀ ಮಳೆಯಾಗಿದೆ.

WhatsApp Image 2022 05 18 at 7.42.08 AM

ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ಸಂಚಾರದ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತ
ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಅಸ್ತವ್ಯಸ್ತಗೊಂಡಿದೆ. ಸತತ ಸುರಿಯುತ್ತಿರುವ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಭಾರಿ ತೊಂದರೆಯಾಗಿದೆ ಕುಮಾರಸ್ವಾಮಿ ಲೇಔಟ್ 14ನೇ ಮುಖ್ಯರಸ್ತೆ, 23ನೇ ಅಡ್ಡ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.

ಇದನ್ನು ಓದಿ :ಯುವನಟಿ ಚೇತನಾ ಸಾವು; ವೈದ್ಯರಿಗೆ ನೋಟಿಸ್, ವಿಚಾರಣೆಗೆ ಕರೆ..

WhatsApp Image 2022 05 18 at 7.42.02 AM

ಶಾಂತಿನಗರ ಡಬಲ್ ರೋಡ್​ ಕೆರೆಯಂತಾಗಿದೆ. ಪರಿಣಾಮ ದ್ವಿಚಕ್ರ ವಾಹನಗಳು, ಆಟೋ ರಿಕ್ಷಾಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಸಾಕಷ್ಟು ಮರಗಳು ಉರುಳಿವೆ . ರಾಜಕಾಲುವೆ ನೀರು ಉಕ್ಕಿ ಹರಿದು ಮನೆಗಳಿಗೆ ನೀರು ನುಗ್ಗಿದೆ. ಜನರ ಗೋಳು ಹೇಳತೀರದ್ದಾಗಿದೆ.

Share This Article
Leave a comment