ಮಂಡ್ಯದ KRS ಜಲಾಶಯದ ಒಳಹರಿವು ಹೆಚ್ಚಳ

Team Newsnap
1 Min Read

KRS ಜಲಾಶಯ ಕಳೆದ ವರ್ಷ ತಡವಾಗಿ ಭರ್ತಿಯಾದ ಕಾರಣ ಈ ವರ್ಷ ಬೇಸಿಗೆಯಲ್ಲೂ ನೀರಿನ ಮಟ್ಟ 100 ಅಡಿ ಗಡಿ ಕಾಯ್ದುಕೊಂಡಿದೆ. ಸದ್ಯ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ.

ಇದನ್ನು ಓದಿ :ಖಿನ್ನತೆಗೆ ಒಳಗಾದ ನಟಿಯೊಬ್ಬಳು ಲೈವ್ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆಗೆ ಶರಣು

ಬುಧವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 100.95 ಅಡಿ ದಾಖಲಾಗಿತ್ತು. 5,396 ಕ್ಯುಸೆಕ್‌ ಒಳಹರಿವು, 1,065 ಕ್ಯುಸೆಕ್‌ ಒಳಹರಿವು ಇದೆ. ಕಳೆದ ವರ್ಷ ಇದೇ ವೇಳೆಗೆ 86.80 ಅಡಿ ನೀರು ಸಂಗ್ರವಾಗಿತ್ತು, ಅಕ್ಟೋಬರ್‌ 2 ರಂದು ಗರಿಷ್ಠ 124.80 ಅಡಿ ತಲುಪಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಿದ್ದರು.

ತಡವಾಗಿ ಭರ್ತಿಯಾಗಿದ್ದ ಕಾರಣ ಇಳಿಮುಖವಾಗುತ್ತಾ ಬಂದಿದ್ದ ನೀರಿನ ಮಟ್ಟ ಏಪ್ರಿಲ್‌ 30ರಂದು 99.50 ಅಡಿಗೆ ಬಂದಿತ್ತು, ಮೇ 25ರಂದು ಮತ್ತೆ 100 ಅಡಿಗೆ ತಲುಪಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ದಾರಾಕಾರ ಮಳೆ ಸುರಿಯುತ್ತಿರುವ ಕಾರಣ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.

‘ಈ ವರ್ಷ ಬೇಸಿಗೆಯಲ್ಲೂ ಉತ್ತಮ ನೀರಿನ ಸಂಗ್ರಹವಾದ ಕಾರಣ ಕಟ್ಟು ಪದ್ಧತಿಯಲ್ಲಿ ರೈತರ ಬೆಳೆಗಳಿಗೂ ನೀರು ಹರಿಸಲಾಗುತ್ತಿತ್ತು. ಕಡಿಮೆಯಾಗುತ್ತಿದ್ದ ನೀರಿನ ಮಟ್ಟ ಮಳೆಯ ಕಾರಣದಿಂದ ಹೆಚ್ಚಾಗುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ

ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ

  • ಗರಿಷ್ಠ ಮಟ್ಟ: 124.80
  • ಇಂದಿನ ಮಟ್ಟ: 100.95 ಅಡಿ
  • ಒಳಹರಿವು: 5396 ಕ್ಯುಸೆಕ್‌
  • ಹೊರಹರಿವು: 1065 ಕ್ಯುಸೆಕ್‌

Share This Article
Leave a comment